Sunday, August 23, 2026

BDA Apartments

Home Front Page ಬಳ್ಳಾರಿಯಲ್ಲಿ ನಟ ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಉಚಿತ ವಸತಿ ಶಾಲೆ ನಿರ್ಮಾಣ-ಮಾಜಿ ಸಚಿವ ಜನಾರ್ಧನರೆಡ್ಡಿ

ಬಳ್ಳಾರಿಯಲ್ಲಿ ನಟ ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಉಚಿತ ವಸತಿ ಶಾಲೆ ನಿರ್ಮಾಣ-ಮಾಜಿ ಸಚಿವ ಜನಾರ್ಧನರೆಡ್ಡಿ

ಬಳ್ಳಾರಿ,ನವೆಂಬರ್,8,2021(www.justkannada.in):  ಬಳ್ಳಾರಿಯಲ್ಲಿ ನಟ ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಉಚಿತ ವಸತಿ ಶಾಲೆ ನಿರ್ಮಾಣ ಮಾಡಲಾಗಿವುದು ಎಂದು ಮಾಜಿ ಸಚಿವ ಜನಾರ್ಧನರೆಡ್ಡಿ ತಿಳಿಸಿದರು.

ಇತ್ತೀಚೆಗೆ  ಹೃದಯಾಘಾತದಿಂದ ನಿಧನರಾದ  ನಟ ಪುನೀತ್ ರಾಜ್‌ಕುಮಾರ್ ಪುಣ್ಯಸ್ಮರಣೆ ಹಿನ್ನೆಲೆ ಬಳ್ಳಾರಿಯ ರುಕ್ಮಿಣಿ ಚಂಗಾರೆಡ್ಡಿ ವೃದ್ಧಾಶ್ರಮದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ನೇತೃತ್ವದಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು. ನಟ ಅಪ್ಪುಗೆ ಮಾಜಿ ಸಚಿವ ಜನಾರ್ಧನ ರೆಡ್ಡಿ  ಶ್ರದ್ಧಾಂಜಲಿ ಸಲ್ಲಿಸಿದರು.

ಬಳಿಕ  ಮಾತನಾಡಿದ ಮಾಜಿ ಸಚಿವ ಜನಾರ್ಧನ ರೆಡ್ಡಿ, ಬಳ್ಳಾರಿಯಲ್ಲಿ ಪುನೀತ್ ಹೆಸರಲ್ಲಿ ಶಾಲೆ ಆರಂಭ ಮಾಡಲಾಗುವುದು. ರಸ್ತೆ, ಪಾರ್ಕ್ ಗಳಿಗೆ ಪುನೀತ್ ಹೆಸರಿಡಲು ಸ್ಥಳೀಯ ಸಂಸ್ಥೆಗಳ ಗಮನ ಸೆಳೆಯಲಾಗುವುದು ಎಂದರು.

ಆರೋಗ್ಯ ಕ್ಷೇತ್ರದಲ್ಲೂ ಸೇವೆ ಮಾಡುವ ಗುರಿ ಇದೆ. ಶಾಶ್ವತವಾಗಿ ಬಳ್ಳಾರಿಯಲ್ಲಿ ವಾಸಿಸಲು ‘ಸುಪ್ರೀಂ’ ಅನುಮತಿ ನೀಡಿದೆ. ಬಳ್ಳಾರಿಯಲ್ಲಿ ಹೆಚ್ಚು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವೆ. ದಿವಂಗತ ನಟ ಪುನೀತ್ ರಾಜ್​ಕುಮಾರ್ ಪದ್ಮಭೂಷಣ, ಪದ್ಮಶ್ರೀ ಸೇರಿದಂತೆ ಇನ್ನೂ ದೊಡ್ಡ ಪ್ರಶಸ್ತಿಗಳು ಲಭಿಸಲಿ ಎಂದು ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ.

Key words: Construction – Free Residential School – Bellary – name – actor- Punith Raj Kumar-Former Minister- Janardhan Reddy