Thursday, August 13, 2026

BDA Apartments

Home Front Page ನಾನು ಹೆಸರಿಗಷ್ಟೇ ‘ಸ್ಪೀಕರ್’ ಎಂದಿದ್ದೇಕೆ ಎಂದ ವಿಶ್ವೇಶ್ವರ ಹೆಗಡೆ ಕಾಗೇರಿ

ನಾನು ಹೆಸರಿಗಷ್ಟೇ ‘ಸ್ಪೀಕರ್’ ಎಂದಿದ್ದೇಕೆ ಎಂದ ವಿಶ್ವೇಶ್ವರ ಹೆಗಡೆ ಕಾಗೇರಿ

ಮೈಸೂರು, ನವೆಂಬರ್ 7, 2021: ನಾನು ಹೆಸರಿಗಷ್ಟೇ ಸ್ಪೀಕರ್. ಆದರೆ, ಶಾಸನ ಸಭೆಯಲ್ಲಿ ಮಾತನಾಡಲು ಉಳಿದವರಿಗೆ ಅವಕಾಶ ಮಾಡಿಕೊಡುವ ಕೆಲಸ ಎಂದು ಕರ್ನಾಟಕ ವಿಧಾನ ಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಉತ್ತರ ಕನ್ನಡದ ಶಿರಸಿ ಬೆಳ್ಳೇಕೆರಿಯಲ್ಲಿ ಬೆಳ್ಳೇಕೇರಿ ಹಬ್ಬಕ್ಕೆ ಚಾಲನೆ‌ ನೀಡಿ ಮಾತನಾಡಿದ ಅವರು, ಕರ್ನಾಟಕ ವಿಧಾನ ಸಭೆಯನ್ನು‌ ಅನುಭವ ಮಂಟಪದ ಮಾದರಿಯಲ್ಲಿ ‌ಮಾಡಬೇಕು‌ ಎಂಬ ಕನಸು, ಗುರಿ‌ ಇದೆ. ಆ ನಿಟ್ಟಿನಲ್ಲಿ ಪ್ರಯತ್ನ‌ ನಡೆಸಲಾಗುತ್ತಿದೆ ಎಂದು ಹೇಳಿದರು.

ಪ್ರಮುಖರಾದ ಆರ್‌.ಎಸ್.ಹೆಗಡೆ, ಎಂ.ಡಿ.ಹೆಗಡೆ, ಆರ್.ವಿ.ಭಾಗವತ್, ಎಂ.ಎನ್.ಹೆಗಡೆ ಬಳಗಂಡಿ, ಪ್ರಭಾಕರ ತಟ್ಟಿಕೈ, ಜಿ‌. ಆರ್.ಹೆಗಡೆ, ಅಜಿತ್ ಬೆಳ್ಲೇಕೆರಿ ಇತರರು ‌ಇದ್ದರು.