Monday, October 12, 2026

Dasara Wishes

BJP DasraWishes_JK DasraWishes JK
Happy Dasara
Home Front Page ಗುಡ್ ನ್ಯೂಸ್! ರೈತರ ಮಕ್ಕಳ ಶಿಕ್ಷಣಕ್ಕೆ ಹೊಸ ಶಿಷ್ಯವೇತನ: ರಾಜ್ಯ ಸರಕಾರದ ಆದೇಶ

ಗುಡ್ ನ್ಯೂಸ್! ರೈತರ ಮಕ್ಕಳ ಶಿಕ್ಷಣಕ್ಕೆ ಹೊಸ ಶಿಷ್ಯವೇತನ: ರಾಜ್ಯ ಸರಕಾರದ ಆದೇಶ

ಬೆಂಗಳೂರು, ನವೆಂಬರ್ 05, 2021: ರೈತರ ಮಕ್ಕಳ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು ಹೊಸ ಶಿಷ್ಯ ವೇತನವನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ.

ವಿದ್ಯಾರ್ಥಿಗಳು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. 10 ನೇ ತರಗತಿ ಪೂರ್ಣಗೊಳಿಸಿದ ನಂತರ ರಾಜ್ಯದ ಶಿಕ್ಷಣ ಸಂಸ್ಥೆಗಳು/ ವಿಶ್ವವಿದ್ಯಾಲಯಗಳು, ಸ್ವಾಯತ್ತ ಕಾಲೇಜುಗಳು, ಪದವಿ ಮತ್ತು ಸ್ನಾತಕೋತ್ತರ ಕೋರ್ಸ್ ಗಳವರೆಗೆ ಪ್ರವೇಶವನ್ನು ಪಡೆದಿರುವ ಕರ್ನಾಟಕ ರಾಜ್ಯ ರೈತರ ಮಕ್ಕಳ ಬ್ಯಾಂಕ್ ಖಾತೆಗೆ ನೇರ ಹಣ ವರ್ಗಾವಣೆ ಪದ್ದತಿಯನ್ನು 2021-22 ನೇ ಸಾಲಿನಿಂದ ಜಾರಿಗೆ ತರಲಾಗಿದೆ.

ಶಿಷ್ಯ ವೇತನವನ್ನು ರಾಜ್ಯದ ಎಲ್ಲಾ ವರ್ಗದ ರೈತರ ಮಕ್ಕಳು ರಾಜ್ಯದ ಇತರೆ ಯಾವುದೇ ಶಿಷ್ಯ ವೇತನವನ್ನು ಪಡೆಯಲು ಆಗದಿದ್ದಲ್ಲಿ, ರೈತರ ಮಕ್ಕಳ ಶಿಷ್ಯ ವೇತನಕ್ಕೆ https://ssp.postmatric.karnataka.gov.in ಪೋರ್ಟಲ್ ಮುಖಾಂತರ ಆನ್ ಲೈನ್ ಅರ್ಜಿ ಸಲ್ಲಿಸಬಹುದಾಗಿದೆ.