Saturday, August 15, 2026

BDA Apartments

Home Cinema ನಟ ಪುನೀತ್ ಆರೋಗ್ಯದ ಸ್ಥಿತಿ ಗಂಭೀರ: ಈಗಲೇ ಏನು ಹೇಳಲು ಆಗಲ್ಲ- ವಿಕ್ರಂ ಆಸ್ಪತ್ರೆ ವೈದ್ಯರಿಂದ...

ನಟ ಪುನೀತ್ ಆರೋಗ್ಯದ ಸ್ಥಿತಿ ಗಂಭೀರ: ಈಗಲೇ ಏನು ಹೇಳಲು ಆಗಲ್ಲ- ವಿಕ್ರಂ ಆಸ್ಪತ್ರೆ ವೈದ್ಯರಿಂದ ಮಾಹಿತಿ.

ಬೆಂಗಳೂರು,ಅಕ್ಟೋಬರ್,29,2021(www.justkannada.in):  ನಟ ಪುನೀತ್ ರಾಜ್ ಕುಮಾರ್ ಅವರ ಆರೋಗ್ಯ ಸ್ಥಿತಿ ತೀವ್ರ ಗಂಭೀರವಾಗಿದ್ದು ಅವರ ಆರೋಗ್ಯದ ಬಗ್ಗೆ ಈಗಲೇ ಏನು ಹೇಳಲು ಆಗಲ್ಲ ಎಂದು ವಿಕ್ರಂ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ನಟ ಪುನೀತ್ ರಾಜ್ ಕುಮಾರ್ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ವಿಕ್ರಂ ಆಸ್ಪತ್ರೆಯ ವೈದ್ಯರು,  ನಟ ಪುನೀತ್ ರಾಜ್ ಕುಮಾರ್ ಅವರಿಗೆ ತೀವ್ರ ಹೃದಯಾಘಾತವಾಗಿತ್ತು. ಬೆಳಿಗ್ಗೆ 11 ಗಂಟೆಗೆ ಆಸ್ಪತ್ರೆಗೆ ಬಂದಿದ್ದರು. ಆಸ್ಪತ್ರೆಗೆ ಬರುವಾಗಲೇ ಸ್ಥಿತಿ ಗಂಭಿರವಾಗಿತ್ತು . ಆಸ್ಪತ್ರೆಗೆ ಬಂದ ಕೂಡಲೇ ಚಿಕಿತ್ಸೆ ನೀಡಿದ್ದೇವೆ. ಏನೇನು ಚಿಕಿತ್ಸೆ ಕೊಡಬೇಕು ಎಲ್ಲವನ್ನೂ ನೀಡುತ್ತಿದ್ದೇವೆ. ಇನ್ನೂ ಆರೋಗ್ಯದ ಬಗ್ಗೆ ಏನೂ ಹೇಳುವುದಕ್ಕೆ ಆಗಲ್ಲ ಎಂದು ವಿಕ್ರಂ ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ.

Key words: Actor- Punith rajkumar- health condition –serious-  Information – Vikram Hospital- Doctors.