Saturday, August 22, 2026

BDA Apartments

Home Cinema ಎರಡೆರೆಡು ಭಾಗಗಳಲ್ಲಿ ‘ಅವತಾರ ಪುರುಷನ’ ಆಗಮನ

ಎರಡೆರೆಡು ಭಾಗಗಳಲ್ಲಿ ‘ಅವತಾರ ಪುರುಷನ’ ಆಗಮನ

ಬೆಂಗಳೂರು, ಅಕ್ಟೋಬರ್ 28, 2021 (www.justkannada.in): ಕೊರೋನಾ ಆತಂಕ ದೂರವಾಗುತ್ತಿದ್ದಂತೆ ಚಿತ್ರ ರಸಿಕರಿಗೆ ಒಂದಾದ ಮೇಲೊಂದು ಸಿಹಿ ಸುದ್ದಿಗಳು ಸಿಗುತ್ತಿವೆ.

ಕಾಮಿಡಿ ಕಿಂಗ್ ಶರಣ್ ಅಭಿನಯದ ಅವತಾರ ಪುರುಷ ಚಿತ್ರ ತಂಡ ದೀಪಾವಳಿಗೂ ಮೊದಲೆ ಸಿನಿ ರಸಿಕರಿಗೆ ಸರ್ಪ್ರೈಜ್ ಕೊಡುತ್ತಿದೆ. ವಿಶೇಷ ಎಂದರೆ ಚಿತ್ರ ತಂಡದಿಂದ ಮತ್ತೊಂದು ಅಚ್ಚರಿ ಮಾಹಿತಿ ಹೊರಬಿದ್ದಿದೆ.

ಕೆ ಜಿ ಎಫ್ ಹಾದಿ ತುಳಿದ ಅವತಾರ ಪುರುಷ ಚಿತ್ರ ಕೂಡ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಅದೆನಾದರು ನಿಜವಾದರೆ ಶರಣ್ ವೃತ್ತಿ ಬದುಕಿನ ಅತಿ ಹೆಚ್ಚು ಬಜೆಟ್ ನ ಚಿತ್ರ ಇದಾಗಲಿದೆ.

ದೀಪಾವಳಿಗೂ ಮೊದಲೆ ಚಿತ್ರತಂಡ ಮೇಕಿಂಗ್ ವೀಡಿಯೋ ಬಿಡುಗಡೆ ಮಾಡಲ್ಲಿದ್ದು, ಸಿನಿಮಾ ಪ್ರಚಾರದ ಕಾವನ್ನ ನಿಧಾನವಾಗಿ ಹೆಚ್ಚಿಸಿಕೊಳ್ಳುತ್ತಿದೆ. ಶರಣ್ ಮತ್ತು ಸಿಂಪಲ್ ಸುನಿ ಕಾಂಬಿನೇಷನ್ ನ ಅವತಾರ್ ಪುರುಷ ಚಿತ್ರ ಹಾರರ್ ಕಾಮಿಡಿ ಸಬ್ಜೆಕ್ಟ್ ಹೊಂದಿದ್ದು ಪ್ರೇಕ್ಷಕರಲ್ಲಿ ಭಯ ಮತ್ತು ಕಾಮಿಡಿಯನ್ನ ಏಕ ಕಾಲಕ್ಕೆ ಹೊಮ್ಮಿಸಲಿದೆ.

ಶರಣ್ ಮತ್ತು ಸುನಿ ಶೈಲಿಯ ಜೊತೆಗೆ ಆಪ್ತಮಿತ್ರ ಥರಹದ ಕಾಮಿಡಿಯನ್ನ ಈ ಚಿತ್ರದಲ್ಲಿ ನೋಡಬಹುದಾಗಿದೆ. ಕಿರಿಕ್ ಪಾರ್ಟಿ, ಅವನೇ ಶ್ರೀಮನ್ನಾರಾಯಣ, ಗೋದಿ ಬಣ್ಣ ಸಾಧಾರಣ ಮೈಕಟ್ಟು ನಂತಹ ಸಕ್ಸಸ್ ಚಿತ್ರಗಳನ್ನನ ಕನ್ನಡಿಗರಿಗೆ ಕೊಟ್ಟ ಪುಷ್ಕರ್ ಮಲ್ಲಿಕಾರ್ಜುನಯ್ಯ ಸಿನಿಮಕ್ಕೆ ಬಂಡವಾಳ ಹೂಡಿದ್ದು ಪುಷ್ಕರ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ಸಿನಿಮ ತೆರೆಕಾಣಲಿದೆ.

ಶರಣ್ ಗೆ ನಾಯಕಿಯಾಗಿ ಚಂದನವನದ ಚಿಟ್ಟೆ ಮತ್ತೆ ಒಂದಾದ ರ್ಯಾಂಬೋ 2 ಜೋಡಿ ಅವತಾರ ಪುರುಷನಿಗೆ ನಾಯಕಿಯಾಗಿ ಈ ಹಿಂದೆ ಚುಟು ಚುಟು ಅಂತ ಹೆಜ್ಜೆ ಹಾಕಿದ್ದ ಅಶಿಕಾ ರಂಗನಾಥ್ ಈ ಚಿತ್ರದಲ್ಲು ತೆರೆ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಪಕ್ಕಾ ಮಾರ್ಡನ್ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಹೊಸ ಅವತಾರದಲ್ಲಿ ಶ್ರೀನಗರ ಕಿಟ್ಟಿ ಜತೆಗೆ ಶರಣ್ ಪುತ್ರಿ ಕೂಡ ಬಣ್ಣ ಹಚ್ಚಲಿದ್ದಾಳೆ.

ಬಹುದಿನಗಳಿಂದ ಕಾಣದಂತೆ ಮಾಯವಾಗಿದ್ದ ಶ್ರೀನಗರ ಕಿಟ್ಟಿ ಅವತಾರ್ ಪುರುಷ ಮೂಲಕ ಮತ್ತೆ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಬ್ಲಾಕ್ ಮ್ಯಾಜಿಷಿಯನ್ ಆಗಿ ವಿಶೇಷ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ಇದರ ಜೊತೆಗೆ ಶರಣ್ ಅವರ ಮಗಳು ‘ಪುಣ್ಯ’ ಕೂಡ ನಟಿಸುತ್ತಿದ್ದಾರೆ. ಈ ಮೂಲಕ ಅಪ್ಪನ ಮೂಲಕವೇ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಇನ್ನೂ ದೊಡ್ಡ ದೊಡ್ಡ ನಟರ ದಂಡೆ ಈ ಚಿತ್ರದಲ್ಲಿದೆ. ಸಾಯಿ‌ಕುಮಾರ್, ಸುಧಾರಾಣಿ, ಅಯ್ಯಪ್ಪ,ಭವ್ಯ, ಸಾಧುಕೋಕಿಲ, ಶ್ರೀನಗರ ಕಿಟ್ಟಿ‌ ಸೇರಿದಂತೆ ಹಲವಾರು ಕಲಾವಿದರು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.