Friday, August 7, 2026

BDA Apartments

Home Front Page ಅಷಾಢ ಪ್ರಶ್ನೆಯೇ ಇಲ್ಲ: ಹೈಕಮಾಂಡ್ ಸೂಚಿಸಿದ್ರೆ ನಾಳೆಯೇ ಸರ್ಕಾರ ರಚನೆಗೆ ಸಿದ್ಧ- ಬಿಜೆಪಿ ಶಾಸಕ ವಿಶ್ವಾಸ…

ಅಷಾಢ ಪ್ರಶ್ನೆಯೇ ಇಲ್ಲ: ಹೈಕಮಾಂಡ್ ಸೂಚಿಸಿದ್ರೆ ನಾಳೆಯೇ ಸರ್ಕಾರ ರಚನೆಗೆ ಸಿದ್ಧ- ಬಿಜೆಪಿ ಶಾಸಕ ವಿಶ್ವಾಸ…

ಬೆಂಗಳೂರು,ಜು,25,2019(www.justkannada.in): ಸರ್ಕಾರ ರಚನಗೆ ಆಷಾಡದ ಪ್ರಶ್ನೆಯೇ ಇಲ್ಲ. ಹೈಕಮಾಂಡ್ ಸೂಚಿಸಿದರೇ ನಾಳೆಯೇ ಸರ್ಕಾರ ರಚನೆ ಮಾಡುತ್ತೇವೆ ಎಂದು ಬಿಜೆಪಿ ಶಾಸಕ ಎಸ್ .ಆರ್ ವಿಶ್ವನಾಥ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್,  ನಾವು 4 ವರ್ಷ ಸುಭದ್ರ ಸರ್ಕಾರ  ನೀಡಬೇಕಿದೆ. ಈಗಾಗಿ ಕೆಲವು ಸ್ಪಷ್ಟನೆ ನೀಡಬೇಕಿದೆ.   ನಮ್ಮ 15 ಶಾಸಕರ  ರಾಜಕೀಯ ಭವಿಷ್ಯದ ಬಗ್ಗೆ  ಚರ್ಚಿಸಬೇಕಿದೆಈಗಾಗಿ ಎಲ್ಲದರ ಬಗ್ಗೆ  ಸ್ಪಷ್ಟನೆ ಪಡೆದು ಹೈಕಮಾಂಡ್ ನಿರ್ಧಾರ ಮಾಡುತ್ತೆ ಎಂದರು.

ಸರ್ಕಾರ ರಚನಗೆ ಆಷಾಡದ ಪ್ರಶ್ನೆಯೇ ಇಲ್ಲ. ಹೈಕಮಾಂಡ್ ಸೂಚಿಸಿದರೇ ನಾಳೆಯೇ ಸರ್ಕಾರ ರಚನೆ ಮಾಡಲಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು,  ಐಎಂಎ ವಂಚನೆ ಪ್ರಕರಣದಲ್ಲಿ ಯಾರು ಯಾರು ಭಾಗಿಯಾಗಿದ್ದಾರೆಂದು ಬಯಲಾಗುತ್ತೆ. ಕೇಸ್ ನಲ್ಲಿ ಯಾರನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ನಮ್ಮ ಸರ್ಕಾರ ಬಂದ ಮೇಲೆ ಯಾವ ರೀತಿ ತನಿಖೆ ನಡೆಸಬೇಕು ಎಂಬ ಬಗ್ಗೆ ನಿರ್ಧರಿಸಲಾಗುತ್ತೆ ಎಂದರು.

Key words: No question-High Command – government –ready-  BJP MLA-SR Vishwanath