Tuesday, August 11, 2026

BDA Apartments

Home Front Page ಹೆಚ್.ಡಿ ಕುಮಾರಸ್ವಾಮಿಯನ್ನ ಬುದ್ಧಿಮಾಂದ್ಯರು ಎಂದ ಬಿಜೆಪಿ ಶಾಸಕ.

ಹೆಚ್.ಡಿ ಕುಮಾರಸ್ವಾಮಿಯನ್ನ ಬುದ್ಧಿಮಾಂದ್ಯರು ಎಂದ ಬಿಜೆಪಿ ಶಾಸಕ.

ಬಳ್ಳಾರಿ,ಅಕ್ಟೋಬರ್,20,2021(www.justkannada.in):  ಆರ್ ಎಸ್ ಎಸ್ ಬಗ್ಗೆ ಟೀಕಿಸಿದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರನ್ನ ಬುದ್ಧಿಮಾಂದ್ಯರು ಎಂದು ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಕರೆದಿದ್ದಾರೆ.

ಆರ್ ಎಸ್ ಎಸ್ ನಲ್ಲಿ ಕಲಿತವರು ವಿಧಾನಸಭೆ ಕಲಾಪದ ವೇಳೆ ಮಾಡಿದ್ದೇನು..? ನೀಲಿಚಿತ್ರ ವೀಕ್ಷಣೆ ಮಾಡುತ್ತಾ ಕೂತಿದ್ದರು.  ಆರ್ ಎಸ್ ಎಸ್ ಶಾಖೆಯಲ್ಲಿ  ಹೇಳಿಕೊಡೋದು ಅದನ್ನೇ ಅಲ್ಲವೇ ಎಂದು ಹೆಚ್.ಡಿ ಕುಮಾರಸ್ವಾಮಿ ಟೀಕಿಸಿದ್ದರು.Preparing –jds-party -Formation -H. D. Kumaraswamy.

ಇದೀಗ ಹೆಚ್.ಡಿ ಕುಮಾರಸ್ವಾಮಿಗೆ ತಿರುಗೇಟು ನೀಡಿರುವ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ, ಹೆಚ್.ಡಿ ಕುಮಾರಸ್ವಾಮಿ ಬುದ್ಧಿಮಾಂದ್ಯರಾಗಿದ್ದಾರೆ. ಸಿಎಂ ಆಗಿದ್ದವರು ಈ ರೀತಿ ಮಾತನಾಡುವುದು ಸರಿಯಲ್ಲ. ಆರ್ ಎಸ್ಎಸ್ ದೇಶ ಕಟ್ಟುವ ಸಂಸ್ಥೆ.  ದೇಶಸೇವೆಯ ಸಂಘಟನೆ ಬಗ್ಗೆ ಈ ರೀತಿ ಕೀಳುಮಟ್ಟದ ಹೇಳಿಕೆ ಸರಿಯಲ್ಲ. ಆರ್ ಎಸ್ ಎಸ್ ಬಗ್ಗೆ ಹೀಗೆ ಮಾತನಾಡಿದ್ರೆ ಛೀಮಾರಿ ಹಾಕಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.

Key words: BJP -MLA –somashekar reddy-former CM- HD Kumaraswamy