Sunday, September 20, 2026

BDA Apartments

ಸ್ತ್ರೀಯರ ಶೌಚಾಲಯದಲ್ಲಿ ಮೊಬೈಲ್ ಇರಿಸಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದವ...
Home Crime ಸ್ತ್ರೀಯರ ಶೌಚಾಲಯದಲ್ಲಿ ಮೊಬೈಲ್ ಇರಿಸಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದವಿಗೆ ಬಿತ್ತು ಧರ್ಮದೇಟು.

ಸ್ತ್ರೀಯರ ಶೌಚಾಲಯದಲ್ಲಿ ಮೊಬೈಲ್ ಇರಿಸಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದವಿಗೆ ಬಿತ್ತು ಧರ್ಮದೇಟು.

ತುಮಕೂರು,ಅಕ್ಟೋಬರ್,19,2021(www.justkannada.in):  ಸ್ತ್ರೀಯರ ಶೌಚಾಲಯದಲ್ಲಿ  ಮೊಬೈಲ್ ಇರಿಸಿ ವಿಡಿಯೋ  ಚಿತ್ರೀಕರಣ ಮಾಡುತ್ತಿದ್ದವನಿಗೆ ಸಾರ್ವಜನಿಕರು ಗೂಸಾ ನೀಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ತುಮಕೂರಿನ ವಿಶ್ವ ಗುರು ಸ್ಕ್ಯಾನಿಂಗ್ ಸೆಂಟರ್​ ನಲ್ಲಿ ಈ ಘಟನೆ ನಡೆದಿದೆ. ಸ್ಕ್ಯಾನಿಂಗ್ ಸೆಂಟರ್​ನಲ್ಲಿ ಕೆಲಸ ಮಾಡ್ತಿದ್ದ ಹರೀಶ್​ ಎಂಬಾತನೇ ಈ ದುಷ್ಕೃತ್ಯ ಎಸಗುತ್ತಿದ್ದ ಎನ್ನಲಾಗಿದೆ. ಚಾಮರಾಜನಗರ ಮೂಲದ ಹರೀಶ್​ ಸ್ಕ್ಯಾನಿಂಗ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ಧ.

ಈ ಮಧ್ಯೆ ಆತ ಸ್ಕ್ಯಾನಿಂಗ್ ಸೆಂಟರ್​ ನ ಟಾಯ್ಲೆಟ್​ ನಲ್ಲಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಹರೀಶ್​, ಮೊಬೈಲ್​ ಇರಿಸಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ.. ಈ ಹಿನ್ನೆಲೆಯಲ್ಲಿ ಆತನಿಗೆ ಸಾರ್ವಜನಿಕರು ಮಹಿಳೆಯರು  ಹಿಗ್ಗಾಮುಗ್ಗ ಥಳಿಸಿದ್ದು, ಇದೀಗ ಕಾಮುಕ ಹರೀಶ್ ನನ್ನ ಹೊಸಬಡಾವಣೆ ಠಾಣಾ ಪೊಲೀಸರ ವಶಕ್ಕೆ ನೀಡಲಾಗಿದೆ.

Key words: mobile – women- toilet -shoot –video-assult