Tuesday, August 18, 2026

BDA Apartments

Home Front Page ಕ್ರಿಕೆಟ್: ಟೀಂ ಇಂಡಿಯಾ ಫೀಲ್ಡಿಂಗ್ ಕೋಚ್ ಹುದ್ದೆಗೆ ಜಾಂಟಿ ರೋಡ್ಸ್‌ ಅರ್ಜಿ !

ಕ್ರಿಕೆಟ್: ಟೀಂ ಇಂಡಿಯಾ ಫೀಲ್ಡಿಂಗ್ ಕೋಚ್ ಹುದ್ದೆಗೆ ಜಾಂಟಿ ರೋಡ್ಸ್‌ ಅರ್ಜಿ !

ಬೆಂಗಳೂರು, ಜುಲೈ 25, 2019 (www.justkannada.in): ಲೆಜೆಂಡ್ ಆಟಗಾರ ಜಾಂಟಿ ರೋಡ್ಸ್‌ ಭಾರತ ತಂಡದ ಫೀಲ್ಡಿಂಗ್ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ.

ಕ್ಷೇತ್ರ ರಕ್ಷಣೆ ಮೂಲಕವೂ ಪಂದ್ಯ ಗೆಲ್ಲಬಹುದು ಎಂಬುದನ್ನು ಕ್ರಿಕೆಟ್‌ ಜಗತ್ತಿಗೆ ತೋರಿಸಿಕೊಟ್ಟ ಮೊತ್ತ ಮೊದಲ ಆಟಗಾರ ರೋಡ್ಸ್‌.

ಒಂದು ಕಾಲದಲ್ಲಿ ಫೀಲ್ಡಿಂಗ್‌ ಮಾಡಿದರೆ ರೋಡ್ಸ್‌ ರೀತಿಯಲ್ಲಿ ಮಾಡಬೇಕು ಎಂದೇ ಹೇಳಲಾಗುತ್ತಿತ್ತು. ಇದೀಗ ಅವರು ಟೀಂ ಇಂಡಿಯಾ ಫೀಲ್ಡಿಂಗ್ ಕೋರ್ಚ್ ಹುದ್ದೆಗೆ ಅರ್ಜಿ ಸಲ್ಲಿಸಿರುವುದು ಕುತೂಹಲ ಮೂಡಿಸಿದೆ.