Wednesday, September 30, 2026

BDA Apartments

ಮತ್ತೆ ಕಿರುತೆರೆ ಎಂಟ್ರಿ ಕೊಡುತ್ತಿರುವ ಶ್ರೀನಗರ ಕಿಟ್ಟಿ ! BDA JK_Adv BDA Adv
Home Cinema ಮತ್ತೆ ಕಿರುತೆರೆ ಎಂಟ್ರಿ ಕೊಡುತ್ತಿರುವ ಶ್ರೀನಗರ ಕಿಟ್ಟಿ !

ಮತ್ತೆ ಕಿರುತೆರೆ ಎಂಟ್ರಿ ಕೊಡುತ್ತಿರುವ ಶ್ರೀನಗರ ಕಿಟ್ಟಿ !

ಬೆಂಗಳೂರು, ಜುಲೈ 25, 2019 (www.justkannada.in): ಬಾಲನಟನಾಗಿ ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದ ನಟ ಶ್ರೀನಗರ ಕಿಟ್ಟಿ ಮತ್ತೆ ಕಿರುತೆರೆಗೆ ಆಗಮಿಸುತ್ತಿದ್ದಾರೆ.

ಉದಯ ಟಿವಿಯಲ್ಲಿ ಪ್ರಸಾರವಾಗುವ ಜೀವನದಿ ಧಾರಾವಾಹಿಯಲ್ಲಿ ಅತಿಥಿಯಾಗಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಸೋಮವಾರದಿಂದ ಶುಕ್ರವಾರ ರಾತ್ರಿ 9 ಗಂಟೆಗೆ ಕಿಟ್ಟಿ ಅಭಿನಯದ ಸಂಚಿಕೆ ಪ್ರಸಾರವಾಗಲಿದೆ.

ಸರಸ್ವತಿ ನಟರಾಜನ್ ಅವರ ಕಾದಂಬರಿ ಆಧರಿಸಿ ಜೀವನದಿ ಧಾರಾವಾಹಿ ನಿರ್ಮಿಸಲಾಗುತ್ತಿದ್ದು ಈಗಾಗಲೇ 560 ಸಂಚಿಕೆಗಳು ಪ್ರಸಾರವಾಗಿ ಕನ್ನಡದ ಕಿರುತೆರೆ ವೀಕ್ಷಕರನ್ನು ಸೆಳೆದಿದೆ. ಈಗ ವಿಶೇಷ ಪಾತ್ರದಲ್ಲಿ ಶ್ರೀನಗರ ಕಿಟ್ಟಿಯವರನ್ನು ಕರೆಸುವ ಮೂಲಕ ಮತ್ತೊಂದು ಮೈಲಿಗಲ್ಲನ್ನು ಸ್ಥಾಪಿಸಲು ಹೊರಟಿದೆ ಧಾರಾವಾಹಿ ತಂಡ.