Monday, October 5, 2026

BDA Apartments

ಮತ್ತೆ ಜೆಡಿಎಸ್ ಪಕ್ಷ ವಿಸರ್ಜನೆ ಮಾತುಗಳನ್ನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರ...
Home Front Page ಆರ್ ಎಸ್ ಎಸ್ ಕಾರ್ಯಕರ್ತರನ್ನ  ವಿವಿಗಳಲ್ಲಿ ಸಿಂಡಿಕೇಟ್ ಸದಸ್ಯರನ್ನಾಗಿ ಮಾಡಿದ್ದಾರೆ- ಹೆಚ್.ಡಿಕೆ ಗಂಭೀರ ಆರೋಪ.

ಆರ್ ಎಸ್ ಎಸ್ ಕಾರ್ಯಕರ್ತರನ್ನ  ವಿವಿಗಳಲ್ಲಿ ಸಿಂಡಿಕೇಟ್ ಸದಸ್ಯರನ್ನಾಗಿ ಮಾಡಿದ್ದಾರೆ- ಹೆಚ್.ಡಿಕೆ ಗಂಭೀರ ಆರೋಪ.

ರಾಮನಗರ, ಅಕ್ಟೋಬರ್,16,2021(www.justkannada.in):  ಬಿಜೆಪಿ ಸರ್ಕಾರದಲ್ಲಿ ಆರ್ ಎಸ್ ಎಸ್ ಕಾರ್ಯಕರ್ತರನ್ನ  ವಿವಿಗಳಲ್ಲಿ ಸಿಂಡಿಕೇಟ್ ಸದಸ್ಯರನ್ನಾಗಿ ಮಾಡಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.

ಇಂದು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, 40 ವರ್ಷದ ಹಿಂದಿನ ಆರ್ ಎಸ್ ಎಸ್ ಬೇರೆ, ಈಗಿನ ಆರ್ ಎಸ್ ಎಸ್ ಬೇರೆ. ಆರ್ ಎಸ್ ಎಸ್ ಕಾರ್ಯಕರ್ತರನ್ನ ವಿವಿಯ ಸಿಂಡಿಕೇಟ್ ಸದಸ್ಯರನ್ನಾಗಿ ಮಾಡಲಾಗಿದೆ. ಕೆಲಸ ಆಗಲು 1-2 ಲಕ್ಷ ರೂಪಾಯಿ ಡಿಮ್ಯಾಂಡ್ ಇಟ್ಟಿದ್ದಾರೆ ಎಂದು ಕಿಡಿಕಾರಿದರು.

ಹಾಗೆಯೇ ಸಿದ್ಧರಾಮಯ್ಯ ವಿರುದ್ಧ ಸರಣಿ ಟ್ವೀಟ್ ಬಗ್ಗೆ ಸ್ಪಷ್ಟನೆ ನೀಡಿದ ಹೆಚ್.ಡಿಕೆ, ನಾನು ಯಾರ ಬಗ್ಗೆಯೂ ಕೆಟ್ಟ ಭಾಷೆ ಬಳಸಿಲ್ಲ.  ವೋಟ್ ಬ್ಯಾಂಕ್ ರಾಜಕಾರಣ ನಾವು ಮಾಡ್ತಿಲ್ಲ. ಕಾಂಗ್ರೆಸ್ ನಿಂದ ವೋಟ್ ಬ್ಯಾಂಕ್ ರಾಜಕಾರಣ ನಡೆಯುತ್ತಿದೆ.  ಸಿದ್ಧರಾಮಯ್ಯರನ್ನ ನರಬೇಧ ಅಂತಾ ಹೇಳಿಲ್ಲ ಎಂದು ತಿಳಿಸಿದರು.

Key words:  RSS activist- syndicate member –university-  Hd kumaraswamy