Friday, October 16, 2026

Dasara Wishes

Happy Dasara
Home Crime ಓವರ್ ಟೆಕ್ ಮಾಡಲು ಹೋಗಿ ಸ್ಕಾರ್ಪಿಯೋ ಕಾರಿಗೆ ಕೆ.ಎಸ್ ಆರ್ ಟಿಸಿ ಬಸ್ ಡಿಕ್ಕಿ…

ಓವರ್ ಟೆಕ್ ಮಾಡಲು ಹೋಗಿ ಸ್ಕಾರ್ಪಿಯೋ ಕಾರಿಗೆ ಕೆ.ಎಸ್ ಆರ್ ಟಿಸಿ ಬಸ್ ಡಿಕ್ಕಿ…

ಮೈಸೂರು,ಜು,24,2019(www.justkannada.in):  ಲಾರಿಯನ್ನ ಓವರ್ ಟೆಕ್ ಮಾಡಲು ಹೋಗಿ ಕೆಎಸ್ ಆರ್ ಟಿಸಿ ಬಸ್ ಸ್ಕಾರ್ಪಿಯೋ ಕಾರಿಗೆ ಡಿಕ್ಕಿಯಾದ ಪರಿಣಾಮ ಮೂವರಿಗೆ ಸಣ್ಣಪುಟ್ಟ ಗಾಯಗೊಂಡಿರುವ ಘಟನೆ  ಮೈಸೂರು- ಮಡಿಕೇರಿ ಮುಖ್ಯರಸ್ತೆಯಲ್ಲಿ ನಡೆದಿದೆ.

ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಇಬ್ಬನಿ ರೆಸಾರ್ಟ್ ಬಳಿ ಈ ಘಟನೆ ನಡೆದಿದೆ. ಕೆಎಸ್ ಆರ್ ಟಿಸಿ  ಬಸ್ ಲಾರಿ ಓವರ್ ಟೆಕ್ ಮಾಡಲು ಹೋಗಿ  ಮಂಗಳೂರಿನಿಂದ ಮೈಸೂರು ಕಡೆ ಬರುತ್ತಿದ್ದ ಏಳು ಯುವಕರಿದ್ದ  ಸ್ಕಾರ್ಪಿಯೋ ಕಾರಿಗೆ ಡಿಕ್ಕಿಯಾಗಿದೆ.

ಘಟನೆಯಲ್ಲಿ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಸದ್ಯ ಕಾರಿನಲ್ಲಿದ್ದ ಯುವಕರು ಅಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನ ಆಂಬುಲೆನ್ಸ್ ಮೂಲಕ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಯಿತು. ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಪೊಲೀಸರು ಭೇಟಿ‌ ನೀಡಿ ಪರಿಶೀಲನೆ ನಡೆಸಿದರು. ಘಟನೆಯಿಂದ ಕೆಲಕಾಲ‌ ಸಂಚಾರ ಸ್ಥಗಿತ ಉಂಟಾಗಿತ್ತು.

Key words: KSRTC bus –collides- with- Scorpio car-mysore-madikeri-road