Saturday, August 8, 2026

BDA Apartments

Home Front Page ಅಂಚೆ ಮೂಲಕ ಪ್ರಧಾನಿ ಮೋದಿಗೆ ಶುಭಾಶಯ ತಿಳಿಸಿದ ಸಿಎಂ ಬೊಮ್ಮಾಯಿ.

ಅಂಚೆ ಮೂಲಕ ಪ್ರಧಾನಿ ಮೋದಿಗೆ ಶುಭಾಶಯ ತಿಳಿಸಿದ ಸಿಎಂ ಬೊಮ್ಮಾಯಿ.

ಮೈಸೂರು,ಅಕ್ಟೋಬರ್,7,2021(www.justkannada.in):  ಪ್ರಧಾನಿ ನರೇಂದ್ರ ಮೋದಿ ಅವರು ಸಾಂವಿಧಾನಿಕ ಹುದ್ದೆ ಅಲಂಕರಿಸಿ ಇಂದಿಗೆ 20 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅಂಚೆ ಮೂಲಕ  ಮೋದಿ ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಶುಭಾಶಯ ತಿಳಿಸಿದ್ದಾರೆ.

ಮೈಸೂರಿನ ಸುಬ್ಬರಾಯನಕೆರೆ ಪೋಸ್ಟ್‌ ಆಫೀಸ್‌‌ ಮೂಲಕ  ಪ್ರಧಾನಿ ಮೋದಿಗೆ ಪೋಸ್ಟ್ ರವಾನೆ ಮಾಡಿ ಶುಭಕೋರಿದರು. 20 ವರ್ಷದ ಕ್ರಿಯಾಶೀಲ, ಅನವರತ ಸೇವೆಗೆ ಅಭಿನಂದನೆ. ದೇಶದ ಜನರಿಗೆ ಉಚಿತ ಲಸಿಕೆ ನೀಡಿದ್ದಕ್ಕೆ ಧನ್ಯವಾದ ಎಂದು ಬರದ ಪೋಸ್ಟ್ ಕಾರ್ಡ್ ಅನ್ನ ಸಿಎಂ ಬೊಮ್ಮಾಯಿ ರವಾನೆ ಮಾಡಿದರು.

ಸಿಎಂ ಬಸವರಾಜ ಬೊಮ್ಮಾಯಿಗೆ ಸಂಸದ ಪ್ರತಾಪ್ ಸಿಂಹ, ಶಾಸಕ ನಾಗೇಂದ್ರ ಸಾಥ್ ನೀಡಿದರು.

Key words: Prime Minister -Narendra Modi – 20 years –CM-Basavaraj Bommai -greeted –post