Tuesday, September 29, 2026

BDA Apartments

ಐಪಿಎಲ್’ನಲ್ಲಿ ಅಪರೂಪದ ದಾಖಲೆ ಬರೆದ ಆರ್’ಸಿಬಿಯ ಎಬಿಡಿ BDA JK_Adv BDA Adv
Home Front Page ಐಪಿಎಲ್’ನಲ್ಲಿ ಅಪರೂಪದ ದಾಖಲೆ ಬರೆದ ಆರ್’ಸಿಬಿಯ ಎಬಿಡಿ

ಐಪಿಎಲ್’ನಲ್ಲಿ ಅಪರೂಪದ ದಾಖಲೆ ಬರೆದ ಆರ್’ಸಿಬಿಯ ಎಬಿಡಿ

ಬೆಂಗಳೂರು, ಅಕ್ಟೋಬರ್ 07, 2021 (www.justkannada.in): ಎಬಿ ಡಿ ವಿಲಿಯರ್ಸ್ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ನಲ್ಲಿ ಅಪರೂಪದ ದಾಖಲೆ ನಿರ್ಮಿಸಿದ್ದಾರೆ.

ಹೌದು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರಮುಖ ಬ್ಯಾಟ್ಸ್‌ಮನ್‌ ಎಬಿ ಡಿ ವಿಲಿಯರ್ಸ್ ಐಪಿಎಲ್‌ನಲ್ಲಿ 250 ಸಿಕ್ಸರ್‌ಗಳ ದಾಖಲೆ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

ಬುಧವಾರ ನಡೆದ 52ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 13 ಎಸೆತಗಳಲ್ಲಿ 19 ರನ್ ಬಾರಿಸಿದ್ದರು. ಇದರಲ್ಲಿ 1 ಫೋರ್, 1 ಸಿಕ್ಸರ್ ಸೇರಿತ್ತು. ಇದರೊಂದಿಗೆ ಎಬಿಡಿ ಐಪಿಎಲ್‌ನಲ್ಲಿ 250 ಸಿಕ್ಸರ್ ದಾಖಲೆ ಪೂರೈಸಿದ್ದಾರೆ.

6ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಎಬಿಡಿ 19 ರನ್ ಬಾರಿಸಿ ಅಜೇಯರಾಗಿ ಉಳಿದಿದ್ದರು. ಪಂದ್ಯ ಗೆಲ್ಲಿಸಲು ಆರ್‌ಸಿಬಿ ಪ್ರಯತ್ನಿಸಿತಾದರೂ ರೋಚಕ 4 ರನ್‌ನಿಂದ ಹೈದರಾಬಾದ್ ತಂಡ ಪಂದ್ಯ ಗೆದ್ದಿತ್ತು.