Tuesday, September 29, 2026

BDA Apartments

ಇಂದಿನಿಂದ ಭಾರತ-ಆಸ್ಟ್ರೇಲಿಯಾ ವನಿತೆಯರ ಟಿ-20 ಕದನ ಶುರು BDA JK_Adv BDA Adv
Home Front Page ಇಂದಿನಿಂದ ಭಾರತ-ಆಸ್ಟ್ರೇಲಿಯಾ ವನಿತೆಯರ ಟಿ-20 ಕದನ ಶುರು

ಇಂದಿನಿಂದ ಭಾರತ-ಆಸ್ಟ್ರೇಲಿಯಾ ವನಿತೆಯರ ಟಿ-20 ಕದನ ಶುರು

ಬೆಂಗಳೂರು, ಅಕ್ಟೋಬರ್ 07, 2021 (www.justkannada.in): ಭಾರತೀಯ ವನಿತಾ ಕ್ರಿಕೆಟ್‌ ತಂಡವೀಗ ಆಸ್ಟ್ರೇಲಿಯ ವಿರುದ್ಧ ಟಿ20 ಸರಣಿಗೆ ಸಜ್ಜಾಗಿದೆ.

ಮೂರು ಪಂದ್ಯಗಳ ಸರಣಿಯ ಮೊದಲ ಮುಖಾಮುಖೀ ಇಂದು ನಡೆಯಲಿದೆ.ಹೆಬ್ಬೆರಳಿನ ಗಾಯದಿಂದ ಏಕದಿನ ಮತ್ತು ಟೆಸ್ಟ್‌ ಸರಣಿಯಿಂದ ಹೊರಗುಳಿದಿದ್ದ ಹರ್ಮನ್‌ಪ್ರೀತ್‌ ಕೌರ್‌ ಈಗ ಸಂಪೂರ್ಣ ಗುಣಮುಖರಾಗಿದ್ದು, ತಂಡಕ್ಕೆ ಮರಳಿದ್ದಾರೆ.

ಮೊದಲ ಪಿಂಕ್‌ಬಾಲ್‌ ಟೆಸ್ಟ್‌ನಲ್ಲಿ ಶತಕ ಬಾರಿಸಿ ಪ್ರಚಂಡ ಫಾರ್ಮ್ ಪ್ರದರ್ಶಿಸಿರುವ ಆರಂಭಿಕ ಆಟಗಾರ್ತಿ ಸ್ಮತಿ ಮಂಧನಾ ಮೇಲೆ ತಂಡ ಭಾರೀ ನಿರೀಕ್ಷೆ ಇರಿಸಿದೆ.

ಶಫಾಲಿ ವರ್ಮ ಕೂಡ ಸಿಡಿದು ನಿಲ್ಲುವ ಸಾಮರ್ಥ್ಯ ಹೊಂದಿದ್ದಾರೆ. ಇವರೊಂದಿಗೆ ಜೆಮಿಮಾ ರೋಡ್ರಿಗಸ್‌ ಕೂಡ ಲಯ ಕಂಡುಕೊಂಡರೆ ಭಾರತದ ಬ್ಯಾಟಿಂಗ್‌ ಬಲಿಷ್ಠ ಎನಿಸಲಿದೆ.