Wednesday, August 12, 2026

BDA Apartments

Home Front Page ದೆಹಲಿ ವಿಮಾನ ನಿಲ್ದಾಣದ ಬಳಿಯಿರುವ ಪಾದಚಾರಿ ಮೇಲ್ಸೇತುವೆ ಕೆಳಗೆ ಸಿಲುಕಿದ ಏರ್ ಇಂಡಿಯಾ ವಿಮಾನ…!

ದೆಹಲಿ ವಿಮಾನ ನಿಲ್ದಾಣದ ಬಳಿಯಿರುವ ಪಾದಚಾರಿ ಮೇಲ್ಸೇತುವೆ ಕೆಳಗೆ ಸಿಲುಕಿದ ಏರ್ ಇಂಡಿಯಾ ವಿಮಾನ…!

ನವದೆಹಲಿ, ಅಕ್ಟೋಬರ್ 4, 2021 (www.justkannada.in): ರಸ್ತೆಯಲ್ಲಿರುವ ಪಾದಚಾರಿ ಮೇಲ್ಸೇತುವೆ ಕೆಳಗೆ ವಿಮಾನವೊಂದು ಸಿಲುಕಿಕೊಂಡಿರುವ ದೃಶ್ಯವನ್ನು ನೀವು ಎಲ್ಲಾದರೂ ಕಂಡಿರುವಿರಾ?! ಹಾಗಾದರೆ ಇಲ್ಲೊಂದು ಸುದ್ದಿ ಇದೆ ನೋಡಿ. ನವದೆಹಲಿಯಲ್ಲಿ ಪಾದಚಾರಿ ಮೇಲ್ಸೇತುವೆಯಡಿ ಭಾನುವಾರ ಬೆಳಿಗ್ಗೆ ಏರ್ ಇಂಡಿಯಾದ ವಿಮಾನವೊಂದು ಸಿಲುಕಿಕೊಂಡು, ದೆಹಲಿ-ಗುರುಗ್ರಾಂ ಹೆದ್ದಾರಿಯ ಸುತ್ತಮುತ್ತಲಿನ ಜನರನ್ನು ಆಶ್ಚರ್ಯಗೊಳಿಸಿದ ಸುದ್ದಿ ವರದಿಯಾಗಿದೆ.

ಹಾಗಾದರೆ ಆ ವಿಮಾನ ಅಲ್ಲಿಗೆ ಹೇಗೆ ಬಂತು ಎಂದಿರಾ? ಏರ್ ಇಂಡಿಯಾದ ಅಧಿಕಾರಿಗಳ ಪ್ರಕಾರ ಇದು ಅಪಘಾತದಿಂದ ಸಂಭವಿಸಿದ್ದಲ್ಲ. ಈ ವಿಮಾನವನ್ನು ಸಾಗಿಸುತ್ತಿದ್ದ ಸಿಬ್ಬಂದಿಗಳು ಈ ಸೇತುವೆಯ ಎತ್ತರವನ್ನು ಅಂದಾಜಿಸುವಲ್ಲಿ ಮಾಡಿರುವ ತಪ್ಪಿನಿಂದಾಗಿ ಇಂತಹ ವಿಲಕ್ಷಣವಾದ ಸ್ಥಳದಲ್ಲಿ ವಿಮಾನ ಸಿಲುಕಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಈ ಕುರಿತಾದ ಒಂದು ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿತ್ತು. ಆ ವೀಡಿಯೊದಲ್ಲಿ ನೀರಿನಿಂದ ಹೊರಕ್ಕೆ ಬಂದ ಮೀನಿನ ಹಾಗೆ ಕಾಣುತ್ತಿದ್ದಂತಹ ಬೃಹತ್ ಗಾತ್ರದ ವಾಹನವೊಂದು ಹೆದ್ದಾರಿಯನ್ನು ಬ್ಲಾಕ್ ಮಾಡಿದ್ದು, ಜನರು ಅಕ್ಕಪಕ್ಕದಿಂದ ಹಾದು ಹೋಗುತ್ತಿರುವ ದೃಶ್ಯ ಕಂಡು ಬಂತು.

“ಆದರೆ ಆ ವಿಮಾನ ದೆಹಲಿ ವಿಮಾನನಿಲ್ದಾಣದದ ಗುಂಪಿಗೆ ಸೇರಿಲ್ಲ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತದೆ ಹಾಗೂ ಆ ವೀಡಿಯೊದಲ್ಲಿ ಆ ವಿಮಾನವನ್ನು ರೆಕ್ಕೆಗಳಿಲ್ಲದೆ ಸಾಗಿಸಲಾಗುತ್ತಿರುವುದು ಕಂಡು ಬರುತ್ತದೆ. ಅದೊಂದು ಸ್ಕ್ರ್ಯಾಪ್ ವಿಮಾನವಾಗಿದ್ದು, ಅದನ್ನು ಸಾಗಿಸುವಾಗ ವಾಹನದ ಚಾಲಕ ಅದನ್ನು ಸಾಗಿಸುವಾಗ ತಪ್ಪಾದ ನಿರ್ಣಯವನ್ನು ತೆಗೆದುಕೊಂಡಿರಬಹುದು,” ಎಂದು ಏರ್ ಇಂಡಿಯಾದ ವಕ್ತಾರರೊಬ್ಬರು ಪತ್ರಿಕೆಗೆ ತಿಳಿಸಿದ್ದಾರೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Air India- flight- beneath – pedestrian – near- Delhi airport.