Thursday, July 30, 2026

BDA Apartments

Home Front Page ಜೀವನದೊಂದಿಗೆ ಜೀವವೂ ಮುಖ್ಯ: ಸರಳವಾಗಿ ದಸರಾ ಆಚರಿಸೋಣ- ಸಿಎಂ ಬೊಮ್ಮಾಯಿ ಸಂದೇಶ.

ಜೀವನದೊಂದಿಗೆ ಜೀವವೂ ಮುಖ್ಯ: ಸರಳವಾಗಿ ದಸರಾ ಆಚರಿಸೋಣ- ಸಿಎಂ ಬೊಮ್ಮಾಯಿ ಸಂದೇಶ.

ಮೈಸೂರು,ಅಕ್ಟೋಬರ್,4,2021(www.justkannada.in):  ವಿಶ್ವವಿಖ್ಯಾತ ಮೈಸೂರು ದಸರಾ 2021ಕ್ಕೆ   ದಿನಗಣನೆ ಆರಂಭವಾಗಿದ್ದು. ಮೈಸೂರು ದಸರಾ ಆಹ್ವಾನ ಪತ್ರಿಕೆ ಕೂಡ ಸಿದ್ಧವಾಗಿದೆ. ಈ ಮಧ್ಯೆ ದಸರಾ ಆಹ್ವಾನ ಪತ್ರಿಕೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಜನತೆಗೆ ಸಂದೇಶ  ನೀಡಿದ್ದಾರೆ.

ಕೊರೊನಾ ಹಿನ್ನೆಲೆ ಸರಳವಾಗಿ ದಸರಾ ಆಚರಿಸೋಣ. ಜೀವನದೊಂದಿಗೆ ಜೀವವೂ ಮುಖ್ಯವೆಂದು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮುಂದಿನ ಬಾರಿ ವಿಜೃಂಭಣೆಯಿಂದ ದಸರಾ ಆಚರಿಸೋಣ ಎಂದು ಸಿಎಂ ಬಸವರಾಜ ಬೊಮ್ಮಾಯಿ  ಸಂದೇಶ ತಿಳಿಸಿದ್ದಾರೆ.

ಅಕ್ಟೋಬರ್ 7ರಂದು ಮೈಸೂರು ದಸರಾ ಉದ್ಘಾಟನೆಯಾಗಲಿದ್ದು, ಮಾಜಿ ಸಿಎಂ  ಎಸ್.ಎಂ. ಕೃಷ್ಣ ಅವರು ಮೈಸೂರು ದಸರಾವನ್ನು ಉದ್ಘಾಟನೆ ಮಾಡಲಿದ್ದಾರೆ. ಅಕ್ಟೋಬರ್ 15ರಂದು ಜಂಬೂಸವಾರಿ ನಡೆಯಲಿದ್ದು, ಸಂಜೆ 4.36 ರಿಂದ 5.30ರ ಶುಭ ಮೀನ ಲಗ್ನದಲ್ಲಿ ಪೂಜೆ ನಡೆಯಲಿದೆ.

Key words: simply –celebrate-mysore dasara- message-CM Basavaraj Bommai