Sunday, August 23, 2026

BDA Apartments

Home Front Page ರೈತರ ಕಬ್ಬು ಬಾಕಿ ಹಣ ಪಾವತಿಸಲು ಸಕ್ಕರೆ ಕಾರ್ಖಾನೆಗಳಿಗೆ ಎರಡು ದಿನಗಳ ಗಡುವು : ಸಚಿವ...

ರೈತರ ಕಬ್ಬು ಬಾಕಿ ಹಣ ಪಾವತಿಸಲು ಸಕ್ಕರೆ ಕಾರ್ಖಾನೆಗಳಿಗೆ ಎರಡು ದಿನಗಳ ಗಡುವು : ಸಚಿವ ಶಂಕರ ಬ ಪಾಟೀಲ ಮುನೇನಕೊಪ್ಪ

ಬೆಂಗಳೂರು,ಅಕ್ಟೋಬರ್,1,2021(www.justkannada.in): ಸಕ್ಕರೆ ಉದ್ಯಮವನ್ನು ಸಂರಕ್ಷಿಸಲು ಸರ್ಕಾರ ಬದ್ದವಾಗಿದೆ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆ, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಂಕರ ಬ.ಪಾಟೀಲ ಮುನೇನಕೊಪ್ಪ ತಿಳಿಸಿದರು.

ಕೈಮಗ್ಗ ಮತ್ತು ಜವಳಿ ಇಲಾಖೆ, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ   ಶಂಕರ ಬ.ಪಾಟೀಲ ಮುನೇನಕೊಪ್ಪ ಅವರ  ಅಧ್ಯಕ್ಷತೆಯಲ್ಲಿಂದು  ರಾಜ್ಯದ ಎಲ್ಲಾ ಸಕ್ಕರೆ ಕಾರ್ಖಾನೆಗಳ ವ್ಯವಸ್ಥಾಪಕ ನಿರ್ದೇಶಕರು ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ಸಭೆಯನ್ನು ಕರೆಯಲಾಗಿತ್ತು.

ಸಭೆಯಲ್ಲಿ 2020-21ನೇ ಹಂಗಾಮಿನ ಮತ್ತು ಹಿಂದಿನ ಸಾಲುಗಳ ಕಬ್ಬು ಬಿಲ್ಲು ಬಾಕಿ ಪಾವತಿಯ ಬಗ್ಗೆ. 2021-22ನೇ ಕಬ್ಬು ಅರೆಯುವ ಹಂಗಾಮವನ್ನು ಪ್ರಾರಂಭಿಸಲು ಪೂರ್ವಸಿದ್ದತಾ ಯೋಜನೆಗಳು, ಕಾರ್ಖಾನೆಗಳ ಕಾರ್ಯ ವ್ಯಾಪ್ತಿಯಲ್ಲಿ ೨೦೨೧-೨೨ನೇ ಹಂಗಾಮಿನಲ್ಲಿ ದೊರೆಯಬಹುದಾದ ಕಬ್ಬಿನ ಲಭ್ಯತೆಯ ಬಗ್ಗೆ ಹಾಗೂ ಕಾರ್ಖಾನೆಗಳು ೨೦೨೧-೨೨ನೇ ಹಂಗಾಮಿಗೆ ಕಬ್ಬು ಸರಬರಾಜು ಸಂಬಂಧ ರೈತರೊಂದಿಗೆ ಮಾಡಿಕೊಂಡಿರುವ ದ್ವಿಪಕ್ಷೀಯ ಒಪ್ಪಂದ ಕುರಿತು,  ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚದ  ಬಗ್ಗೆ.  ೨೦೨೧-೨೨ನೇ ಸಾಲಿನ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯ (ಎಫ್.ಆರ್.ಪಿ) ಬಗ್ಗೆ, ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯಾದ ಎಥನಾಲ್ ಹಾಗೂ ಕಬ್ಬಿನ ಉಪ-ಉತ್ಪಾದಕಗಳ ಉತ್ಪಾದನಾ ಯೋಜನೆಯ ಪ್ರಗತಿ ಬಗ್ಗೆ ಪರಿಶೀಲಿಸಲಾಯಿತು.

ಈ ವೇಳೆ ಮಾತಾನಾಡಿದ ಸಚಿವ ಶಂಕರ ಪಾಟೀಲ ಮುನೇನಕೊಪ್ಪ,  ಸಕ್ಕರೆ ಉದ್ಯಮವನ್ನು ಸಂರಕ್ಷಿಸಲು ಸರ್ಕಾರ ಬದ್ದವಾಗಿದೆ. ಆದರೆ ರೈತ ಹಿತರಕ್ಷಣೆ ಸರ್ಕಾರದ ಮೊದಲ ಅದ್ಯತೆ. ಸರ್ಕಾರದ ನೀತಿ ನಿಯಮಗಳನ್ನು ಪಾಲನೆ ಮಾಡಿ ಉದ್ಯಮ ನಡೆಸುವಂತೆ ಸಚಿವರು ಕಾರ್ಖಾನೆಗಳಿಗೆ ತಾಕೀತು ಮಾಡಿದರು.

ಸಚಿವರ ಪರಿಶೀಲನೆ ಸಭೆಯಲ್ಲಿ ಈ ಕೆಳಕಂಡ ಕಾರ್ಖಾನೆಗಳು ೨೦೨೦-೨೧ ಸಾಲಿನಲ್ಲಿ ರೈತರ ಕಬ್ಬಿನ ಬಿಲ್ಲು ಬಾಕಿ ಉಳಿಸಿಕೊಂಡಿರುವುದು ಕಂಡು ಬಂದಿತ್ತು.

ಕ್ರ.ಸಂ. ಕಾರ್ಖಾನೆಗಳ ಹೆಸರು ಬಾಕಿ ಹಣ

(ರೂ. ಲಕ್ಷಗಳಲ್ಲಿ)*

೧ ಸೋಮೇಶ್ವರ ಎಸ್‌ಎಸ್.ಕೆ. ಲಿಮಿಟೆಡ್, ಬೈಲಹೊಂಗಲ, ಬೆಳಗಾವಿ

69.೦೦

೨. ಜಮಖಂಡಿ ಶುರ‍್ಸ್ ಲಿ, ಹಿರೆಪಾದಸಲಗಿ, ಜಮಖಂಡಿ, ಬಾಗಲಕೋಟೆ.

105.೦೦

೩. ನಿರಾಣಿ ಶುರ‍್ಸ್ ಲಿ.,ಮುಧೋಳ ತಾ:,ಬಾಗಲಕೋಟೆ.

567.೦೦

೪. ಶ್ರೀ ಸಾಯಿಪ್ರಿಯಾ ಶುರ‍್ಸ್ ಲಿ., ಹಿಪ್ಪರಗಿ, ಬಾಗಲಕೋಟೆ.

415.೦೦

೫. ಬೀದರ  ಕಿಸಾನ್ ಸಕ್ಕರೆ ಕಾರ್ಖಾನೆ ಲಿ., ಬೀದರ್.

209.೦೦

೬. ಶ್ರೀ ಬಸವೇಶ್ವರ ಶುರ‍್ಸ್ ಲಿ., ಕಾರಜೋಳ, ವಿಜಯಪುರ.

2211.೦೦

೭. ಕೋರ್ ಗ್ಲೀನ್ ಶುರ‍್ಸ್ ಅಂಡ್ ಫ್ಯೂಎಲ್ಸ್ ಪ್ರೈ. ಲಿ., ಶಹಾಪುರ, ಯಾದಗಿರಿ.

641.೦೦

ಪ್ರಸ್ತಕ ಸಾಲಿನಲ್ಲಿ ರೈತರ ಕಬ್ಬಿನ ಹಣ ಪಾವತಿ ಬಾಕಿ ಉಳಿಸಿಕೊಂಡಿರುವ ಕಾರ್ಖಾನೆಗಳು ಇನ್ನೆರಡು ದಿನಗಳಲ್ಲಿ(ಆಕ್ಟೋಬರ್ 03 ) ಹಣ  ಪಾವತಿ ಮಾಡಬೇಕು. ತಪ್ಪಿದಲ್ಲಿ ಸರ್ಕಾರ ಇದನ್ನು  ಗಂಭೀರವಾಗಿ ಪರಿಗಣಿಸಿ, ಶಿಸ್ತು ಕ್ರಮ  ಕೈಗೊಳ್ಳಲಿದೆ.

ಈಗಾಗಲೇ ಬಸವೇಶ್ವರ ಶುಗರ್, ಕಾರಚೋಳ, ವಿಜಯಪುರ ಜಿಲ್ಲೆ ಹಾಗೂ ಕೋರ್ ಗ್ರೀನ್ ಶುಗರ್,  ಶಹಾಪುರ ತಾಲ್ಲೂಕು, ಯಾದಗಿರಿ ಜಿಲ್ಲೆ. ಇವರೆಡು ಕಾರ್ಖಾನೆಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ವಸೂಲಾತಿಗೆ ನೋಟೀಸ್ ಜಾರಿಗೊಳಿಸಲಾಗಿದೆ. ಉಳಿದ ಕಾರ್ಖಾನೆಗಳು ಇನ್ನೆರಡು ದಿನಗಳಲ್ಲಿ( ಆಕ್ಟೋಬರ್ 03) ರೈತರಿಗೆ ಹಣ ಪಾವತಿಸಿದ್ದರೆ ಜಿಲ್ಲಾಧಿಕಾರಿಗಳ ಮೂಲಕ ಕಠಿಣಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಶಂಕರ ಪಾಟೀಲ ಮುನೇನಕೊಪ್ಪ ತಾಕೀತು ಮಾಡಿದರು.

Key words: government -committed – preserve – sugar industry-Minister -Shankara b. Patiala Munanakoppa