Friday, September 18, 2026

BDA Apartments

ಇಂದಿನಿಂದ ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಆಸನಗಳ ಭರ್ತಿ ಆದೇಶ ಜಾರಿ BDA JK_Adv BDA Adv
Home Cinema ಇಂದಿನಿಂದ ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಆಸನಗಳ ಭರ್ತಿ ಆದೇಶ ಜಾರಿ

ಇಂದಿನಿಂದ ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಆಸನಗಳ ಭರ್ತಿ ಆದೇಶ ಜಾರಿ

ಮೈಸೂರು, ಅಕ್ಟೋಬರ್ 1, 2021 (www.justkannada.in): ಇಂದಿನಿಂದ ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಆಸನಗಳ ಭರ್ತಿ ಆದೇಶ ಅಧಿಕೃತವಾಗಿ ಜಾರಿಗೆ ಬರಲಿದೆ.

ರಾಜ್ಯ ಸರ್ಕಾರ ಥಿಯೇಟರ್ ಗಳಲ್ಲಿ ಹೌಸ್ ಫುಲ್ ಪ್ರದರ್ಶನಕ್ಕೆ ಅವಕಾಶ ನೀಡಿತ್ತು. ಆ ಆದೇಶ ಇಂದಿನಿಂದ ಜಾರಿಗೆ ಬರಲಿದ್ದು, ಇದಕ್ಕಾಗಿ ಚಿತ್ರಮಂದಿರಗಳು ಸಜ್ಜಾಗಿವೆ.

ಇಂದು ನವರಸನಾಯಕ ಜಗ್ಗೇಶ್ ಪುತ್ರ ಗುರುರಾಜ್ ಜಗ್ಗೇಶ್ ಮುಖ್ಯಪಾತ್ರದಲ್ಲಿ ಅಭಿನಯಿಸಿರುವ ಕಾಗೆ ಮೊಟ್ಟೆ ಸಿನಿಮಾ ಬಿಡುಗಡೆಯಾಗುತ್ತಿದೆ.

ನಾಳೆ ಮಹಾತ್ಮಾ ಗಾಂಧೀಜಿ ಕುರಿತಾದ ‘ಮೋಹನ ದಾಸ’ ಎನ್ನುವ ಸಿನಿಮಾ ಬಿಡುಗಡೆಯಾಗುತ್ತಿದೆ. ಹಿರಿಯ ನಿರ್ದೇಶಕ ಪಿ.ಶೇಷಾದ್ರಿ ಅವರ ನಿರ್ದೇಶನದ ಸಿನಿಮಾ ಇದಾಗಿದೆ.

key words: 100% occupancy in theatres from today