Friday, August 14, 2026

BDA Apartments

Home Front Page ಟೀಂ ಇಂಡಿಯಾ ಕೋಚ್ ಹುದ್ದೆಗೆ ಮಹೇಲಾ ಜಯವರ್ಧನೆ ಅರ್ಜಿ

ಟೀಂ ಇಂಡಿಯಾ ಕೋಚ್ ಹುದ್ದೆಗೆ ಮಹೇಲಾ ಜಯವರ್ಧನೆ ಅರ್ಜಿ

ನವದೆಹಲಿ, ಜುಲೈ 23, 2019 (www.justkannada.in): ಶ್ರೀಲಂಕಾದ ಮಾಜಿ ನಾಯಕ ಟೀಂ ಇಂಡಿಯಾ ಕೋಚ್ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಬಿಸಿಸಿಐ ಟೀಂ ಇಂಡಿಯಾ ಕೋಚ್ ನೇಮಕಕ್ಕೆ ಮುಂದಾಗಿದೆ. ಜುಲೈ 30 ರ ಸಂಜೆ 5 ಗಂಟೆಯವರೆಗೆ ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಈಗಿರುವ ಮುಖ್ಯ ಕೋಚ್ ರವಿಶಾಸ್ತ್ರಿ ಮತ್ತೆ ಕೋಚ್ ಸ್ಥಾನಕ್ಕೇರಲು ಅರ್ಜಿ ಸಲ್ಲಿಸಬೇಕಾಗಿಲ್ಲ. ನೇರವಾಗಿ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.

ಮಹೇಲಾ, ತಮ್ಮ ತರಬೇತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 2017,‌ 2019ರಲ್ಲಿ ಚಾಂಪಿಯನ್ ಮಾಡಿದ್ದರು. ಮಹೇಲಾ ಜೊತೆ ಟೀಂ ಇಂಡಿಯಾ ಮಾಜಿ ಕೋಚ್ ಗ್ಯಾರಿ ಕರ್ಸ್ಟನ್ ಹಾಗೂ ಆಸ್ಟ್ರೇಲಿಯಾ ಮೂಲದ ಟಾಮ್ ಮೂಡಿ ಸ್ಪರ್ಧೆಯಲ್ಲಿದ್ದಾರೆ ಎನ್ನಲಾಗಿದೆ.