Sunday, August 9, 2026

BDA Apartments

Home Front Page ಸೆ.27 ರಂದು ಎಂದಿನಂತೆ ಬಸ್ ಸಂಚಾರ: ನಿಜವಾದ ರೈತರು ನಮ್ಮ ಪರ ಇದ್ದಾರೆ- ಸಚಿವ ಶ್ರೀರಾಮುಲು.

ಸೆ.27 ರಂದು ಎಂದಿನಂತೆ ಬಸ್ ಸಂಚಾರ: ನಿಜವಾದ ರೈತರು ನಮ್ಮ ಪರ ಇದ್ದಾರೆ- ಸಚಿವ ಶ್ರೀರಾಮುಲು.

ಬೆಳಗಾವಿ,ಸೆಪ್ಟಂಬರ್,25,2021(www.justkannada.in):  ಸೆಪ್ಟಂಬರ್ 27 ರಂದು ಭಾರತ್ ಬಂದ್ ಗೆ ಸಾರಿಗೆ ಇಲಾಖೆ ಬೆಂಬಲ ಇಲ್ಲ. ಅಂದು ಎಂದಿನಂತೆ ಬಸ್ ಸಂಚಾರ ಇರಲಿದೆ ಎಂದು ಸಾರಿಗೆ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.

ಬೆಳಗಾವಿಯ ಚಿಕ್ಕೋಡಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಸಾರಿಗೆ ಸಚಿವ ಶ್ರೀರಾಮುಲು, ಕಾಂಗ್ರೆಸ್ ರೈತರನ್ನ ದಾರಿ ತಪ್ಪಿಸುತ್ತಿದೆ. ಕಾಂಗ್ರೆಸ್ ನಲ್ಲಿ ಟ್ರಬಲ್ ನಾಯಕರಿದ್ದಾರೆ. ನಿಜವಾದ ರೈತರು ನಮ್ಮ ಪರ ಇದ್ದಾರೆ. ನಮ್ಮದು ಡಬಲ್ ಇಂಜಿಂನ್ ಪಕ್ಷ. ಬಿಳಿ ಶರ್ಟ್ ರೈತರು ಮಾತ್ರ ಕಾಂಗ್ರೆಸ್ ಬೆಂಬಲಿಸುತ್ತಾರೆ ಎಂದರು.

ಇನ್ನು ಅಮಾನತಾಗಿರುವ ಸಾರಿಗೆ ನೌಕರರನ್ನ ಮತ್ತೆ ಸೇವೆಗೆ ಸೇರಿಸಿಕೊಳ್ಳಲಾಗುವುದು. ಅಮಾನತುಗೊಂಡ ನೌಕರರು ಮತ್ತೆ ಕರ್ತವ್ಯಕ್ಕೆ ಬರಬಹುದು ಎಂದು ಸಚಿವ ಶ್ರೀರಾಮುಲು ತಿಳಿಸಿದರು.

Key words: Bus – usual – Sept. 27-bharath bandh-Minister- Sriramulu.