Saturday, August 22, 2026

BDA Apartments

Home Cinema ಮತ್ತೆ ‘ಪ್ರೀಮಿಯರ್ ಪದ್ಮಿನಿ’’ ಏರಲು ರೆಡಿಯಾದ ನವರಸ ನಾಯಕ

ಮತ್ತೆ ‘ಪ್ರೀಮಿಯರ್ ಪದ್ಮಿನಿ’’ ಏರಲು ರೆಡಿಯಾದ ನವರಸ ನಾಯಕ

ಬೆಂಗಳೂರು, ಸೆಪ್ಟೆಂಬರ್ 25, 2021 (www.justkannda.in): ‘ಪ್ರೀಮಿಯರ್ ಪದ್ಮಿನಿ’’ ಚಿತ್ರತಂಡದೊಂದಿಗೆ ಮತ್ತೊಂದು ಸಿನಿಮಾ ಮಾಡಲಿದ್ದಾರೆ ನವರಸ ನಾಯಕ ಜಗ್ಗೇಶ್.

ಹೌದು. ರಮೇಶ್ ಇಂದಿರಾ, ಶ್ರುತಿ ನಾಯ್ಡು ನಿರ್ಮಾಣ, ನಿರ್ದೇಶನದ ಚಿತ್ರದಲ್ಲಿ ಜಗ್ಗೇಶ್ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚಿಗೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ರಂಗನಾಯಕ, ತೋತಾಪುರಿ ಬಳಿಕ ಜಗ್ಗೇಶ್ ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಸಿನಿಮಾ ಕೂಡ ಮೊನ್ನೆ ತಾನೆ ಪ್ರಕಟವಾಗಿದೆ. ಈ ನಡುವೆ ಮತ್ತೊಂದು ಚಿತ್ರಕ್ಕೂ ಜಗ್ಗೇಶ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಈ ಮೊದಲು ರಮೇಶ್ ಇಂದಿರಾ, ಶ್ರುತಿ ನಾಯ್ಡು ತಂಡದೊಂದಿಗೆ ‘ಪ್ರೀಮಿಯರ್ ಪದ್ಮಿನಿ’ ಚಿತ್ರದಲ್ಲಿ ಜಗ್ಗೇಶ್ ಕಾಣಿಸಿಕೊಂಡಿದ್ದರು.

key words: actor jaggesh agree to do film with shruthi naidu films