Tuesday, September 15, 2026

BDA Apartments

ಐಪಿಎಲ್: ಡೆಲ್ಲಿ ವಿರುದ್ಧದ ಪಂದ್ಯಕ್ಕೂ ಮುನ್ನ ಸನ್ ರೈಸರ್ಸ್ ಹೈದ್ರಾಬಾದ್ ಗೆ...
Home Front Page ಐಪಿಎಲ್: ಡೆಲ್ಲಿ ವಿರುದ್ಧದ ಪಂದ್ಯಕ್ಕೂ ಮುನ್ನ ಸನ್ ರೈಸರ್ಸ್ ಹೈದ್ರಾಬಾದ್ ಗೆ ಬಿಗ್ ಶಾಕ್.

ಐಪಿಎಲ್: ಡೆಲ್ಲಿ ವಿರುದ್ಧದ ಪಂದ್ಯಕ್ಕೂ ಮುನ್ನ ಸನ್ ರೈಸರ್ಸ್ ಹೈದ್ರಾಬಾದ್ ಗೆ ಬಿಗ್ ಶಾಕ್.

ನವದೆಹಲಿ,ಸೆಪ್ಟಂಬರ್,22,2021(www.justkannada.in): ಕೊರೋನಾದಿಂದಾಗಿ ಮುಂದೂಡಲ್ಪಟ್ಟ ಐಪಿಎಲ್  ಪಂದ್ಯಗಳು  ಇದೀಗ ದುಬೈನಲ್ಲಿ ನಡೆಯುತ್ತಿದೆ. ಈ ಮಧ್ಯೆ ಇಂದು ಡೆಲ್ಲಿ ಕ್ಯಾಪಿಟಲ್ ವಿರುದ್ಧ ಸೆಣೆಸಾಡಬೇಕಿದ್ದ ಸನ್ ರೈಸರ್ಸ್ ಹೈದ್ರಾಬಾದ್ ಗೆ ಬಿಗ್ ಶಾಕಿಂಗ್ ನ್ಯೂಸ್ ಸಿಕ್ಕಿದೆ.

ಹೌದು ಸನ್ ರೈಸರ್ಸ್ ಹೈದ್ರಾಬಾದ್  ತಂಡದ ಬೌಲರ್ ನಟರಾಜನ್ ಗೆ  ಕೋವಿಡ್ ಸೋಂಕು ದೃಢವಾಗಿದೆ.  ನಟರಾಜನ್ ಅವರಿಗೆ ಕೋವಿಡ್ ಸೋಂಕು ದೃಢವಾದ ಹಿನ್ನೆಲೆಯಲ್ಲಿ ಅವರನ್ನು ಮತ್ತು ಅವರ ಸಂಪರ್ಕದಲ್ಲಿದ್ದ ಆರು ಮಂದಿಯನ್ನು ಐಸೋಲೇಟ್ ಮಾಡಲಾಗಿದೆ.

ದುಬೈನಲ್ಲಿ ಇಂದು ಡೆಲ್ಲಿಕ್ಯಾಪಿಟಲ್ಸ್  ವಿರುದ್ಧ ಹೈದ್ರಾಬಾದ್ ತಂಡ ಸೆಣೆಸಾಡಲು ಸಿದ್ಧವಾಗಿತ್ತು. ಇದರ ಮಧ್ಯೆ ಆಟಗಾರನಿಗೆ ಕೋವಿಡ್ ದೃಢವಾಗಿದ್ದು, ಪಂದ್ಯವನ್ನು ನಡೆಸುತ್ತಾರಾ ಅಥವಾ ಇಲ್ಲವಾ ಎಂಬುದನ್ನು ಕಾದು ನೋಡಬೇಕಿದೆ.

Key words: IPL-Big shock – SunRisers Hyderabad – match -against –Delhi capital