Monday, October 12, 2026

Dasara Wishes

Happy Dasara
Home Front Page ಕಾಂಗ್ರೆಸ್​ಗೆ ಇದ್ದಕ್ಕಿದ್ದಂತೆ ಹಿಂದುಗಳ ಮೇಲೆ‌ ಪ್ರೀತಿ ಬಂದಿದ್ದೇಕೆ?: ಬಿ.ವೈ.ವಿಜಯೇಂದ್ರ ಟೀಕೆ

ಕಾಂಗ್ರೆಸ್​ಗೆ ಇದ್ದಕ್ಕಿದ್ದಂತೆ ಹಿಂದುಗಳ ಮೇಲೆ‌ ಪ್ರೀತಿ ಬಂದಿದ್ದೇಕೆ?: ಬಿ.ವೈ.ವಿಜಯೇಂದ್ರ ಟೀಕೆ

ದಾವಣಗೆರೆ, ಸೆಪ್ಟೆಂಬರ್ 19, 2021 (www.justkannada.in): ಕಾಂಗ್ರೆಸ್​ಗೆ ಇದ್ದಕ್ಕಿದ್ದಂತೆ ಹಿಂದುಗಳ ಮೇಲೆ‌ ಪ್ರೀತಿ ಬಂದಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಟೀಕಿಸಿದ್ದಾರೆ.

ದಾವಣಗೆರೆಯಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ವಿಜಯೇಂದ್ರ, ದೇವಾಲಯಗಳ ಹೆಸರಿನಲ್ಲಿ ಕಾಂಗ್ರೆಸ್ ಮೊಸಳೆ‌ ಕಣ್ಣೀರು ಹಾಕುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ನಂಜನಗೂಡಿನಲ್ಲಿ ಅಧಿಕಾರಿಗಳು ಅತುರದ ನಿರ್ಧಾರ ತೆಗೆದುಕೊಂಡಿದ್ದಾರೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ದೇವಾಲಯ ತೆರವು ಮಾಡಬೇಕಿತ್ತು ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿಯವರ ಹುಟ್ಟುಹಬ್ಬವನ್ನು ದೇಶದ ಪ್ರತಿಯೊಬ್ಬರು ಸಂಭ್ರಮದಿಂದ ಆಚರಿಸಿದರು. ಆದ್ರೆ ಕಾಂಗ್ರೆಸ್ ನಿರುದ್ಯೋಗ ದಿನಾಚರಣೆ ಆಚರಣೆ ಮಾಡಿದೆ ಎಂದು ಕೈ ಪಕ್ಷದ ವಿರುದ್ಧ ಮಾಜಿ ಸಿಎಂ ಬಿಎಸ್ವೈ ಪುತ್ರ ಕಿಡಿಕಾರಿದ್ದಾರೆ.

key words: Why did the Congress suddenly fall in love with Hindus ? says BY Vijayendra