Sunday, August 23, 2026

BDA Apartments

Home Front Page ಪ್ರಧಾನಿ ಮೋದಿ ಪಡೆದ ಉಡುಗೊಡೆ ನಿಮ್ಮದಾಗಬೇಕೇ? ಹಾಗಿದ್ದರೆ ಹರಾಜಿನಲ್ಲಿ ಪಾಲ್ಗೊಳ್ಳಿ…

ಪ್ರಧಾನಿ ಮೋದಿ ಪಡೆದ ಉಡುಗೊಡೆ ನಿಮ್ಮದಾಗಬೇಕೇ? ಹಾಗಿದ್ದರೆ ಹರಾಜಿನಲ್ಲಿ ಪಾಲ್ಗೊಳ್ಳಿ…

ಬೆಂಗಳೂರು, ಸೆಪ್ಟೆಂಬರ್ 19, 2021 (www.justkannada.in): ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿಕ್ಕ ಉಡುಗೊರೆಗಳನ್ನು ನೀವು ಪಡೆಯಬೇಕಾ..? ಆಗಿದ್ದರೆ ಮುಂದೆ ನಡೆಯುವ ಹರಾಜಿನಲ್ಲಿ ಪಾಲ್ಗೊಳ್ಳಿ…

ಹೌದು. ತಾವು ಪಡೆದ ಉಡುಗೊರೆಗಳು ಮತ್ತು ಸ್ಮರಣಿಕೆಗಳನ್ನು ಹರಾಜಿಗೆ ಇಡಲಾಗಿದ್ದು, ಜನರು ಇದರಲ್ಲಿ ಭಾಗವಹಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕೋರಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಮೋದಿ, ಹರಾಜಿನಿಂದ ಬರುವ ಹಣ ‘ನವಾಮಿ ಗಂಗೆ’ ಯೋಜನೆಗೆ ಬಳಕೆಯಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಕೆಲವು ವರ್ಷಗಳಿಂದ ನಾನು ಹಲವಾರು ಉಡುಗೊರೆ ಮತ್ತು ಸ್ಮರಣಿಕೆಗಳನ್ನು ಸ್ವೀಕರಿಸಿದ್ದೇನೆ. ಇದನ್ನು ಹರಾಜು ಮಾಡಲಾಗುತ್ತಿದೆ. ಇದರಲ್ಲಿ ಒಲಿಂಪಿಕ್‌ ವಿಜೇತರು ನೀಡಿದ ವಿಶೇಷ ಸ್ಮರಣಿಕೆಗಳೂ ಇವೆ ಎಂದು ತಿಳಿಸಿದ್ದಾರೆ.

key words: Should PM Modi’s gift be yours? then, attend the auction …