Saturday, August 15, 2026

BDA Apartments

Home Front Page ಮಂಡ್ಯದಲ್ಲಿ ಅಕ್ರಮ ಗಣಿಗಾರಿಕೆ ತಡೆಯಲು ದೊಡ್ಡ  ಸಮರ್ಥರಿದ್ದಾರೆ, ನಾನ್ಯಾಕೆ ಮೂಗು ತೂರಿಸಲಿ- ಮಾಜಿ ಸಿಎಂ ಹೆಚ್.ಡಿ...

ಮಂಡ್ಯದಲ್ಲಿ ಅಕ್ರಮ ಗಣಿಗಾರಿಕೆ ತಡೆಯಲು ದೊಡ್ಡ  ಸಮರ್ಥರಿದ್ದಾರೆ, ನಾನ್ಯಾಕೆ ಮೂಗು ತೂರಿಸಲಿ- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ

ಮಂಡ್ಯ ,ಸೆಪ್ಟಂಬರ್,13,2021(www.justkannada.in):  ಮಂಡ್ಯದಲ್ಲಿ ಅಕ್ರಮ ಗಣಿಗಾರಿಕೆ ತಡೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಸಂಸದೆ ಸುಮಲತಾ ಅಂಬರೀಶ್ ಗೆ ಟಾಂಗ್ ನೀಡಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಅಕ್ರಮ ಗಣಿಗಾರಿಕೆ ತಡೆಯಲು ಸಮರ್ಥರಿದ್ದಾರೆ, ನಾನ್ಯಾಕೆ ಮೂಗು ತೂರಿಸಲಿ ಎಂದಿದ್ದಾರೆ.

ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಮಂಡ್ಯದಲ್ಲಿ  ಗಣಿಗಾರಿಕೆ ತಡೆಯಲು ದೊಡ್ಡ ಸಮರ್ಥರಿದ್ದಾರೆ. ಸಮರ್ಥರೇ ಮಂಡ್ಯ ಗಣಿಗಾರಿಕೆ ನಿಲ್ಲಿಸಲಿದ್ದಾರೆ. ಅವರೇ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳುತ್ತಾರೆ. ಈ ಗೊಂದಲದಲ್ಲಿ ನಾನು ಮೂಗು ತೂರಿಸುವುದಿಲ್ಲ.

ಕಲ್ಬುರ್ಗಿ ಪಾಲಿಕೆ ಫಲಿತಾಂಶ ಅತಂತ್ರ ಹಿನ್ನೆಲೆ, ಜೆಡಿಎಸ್ ಬೆಂಬಲ ಯಾರಿಗೆ ಎಂಬ ಪ್ರಶ್ನೆಗೆ ಉತ್ತರಿಸಿದ ಹೆಚ್.ಡಿ ಕುಮಾರಸ್ವಾಮಿ, ಯಾರಿಗೆ ಬೆಂಬಲಿಸಬೇಕೆಂಬ  ವಿಚಾರದ ಬಗ್ಗೆ ಹೇಳುವುದಕ್ಕೆ ಇನ್ನು ಸಮಯವಿದೆ ಎಂದರು.

ಇಂದಿನ ಅದಿವೇಶನದಲ್ಲಿ ಯಾವುದೇ ಚರ್ಚೆ ಇರಲ್ಲ. ಇವತ್ತು ಕೇವಲ ಸಂತಾಪಸೂಚಕ ಸಭೆ. ನಾಳೆಯಿಂದ ಅಧಿವೇಶನದಲ್ಲಿ ಚರ್ಚೆಗಳು ನಡೆಯಲಿವೆ. ಅಧಿವೇಶನದಲ್ಲಿ ಪ್ರಸ್ತಾಪಿಸಬೇಕಿರುವ ವಿಷಯಗಳ ಬಗ್ಗೆ ಚರ್ಚಿಸಲು ಜೆಡಿಎಲ್ ಪಿ ಸಭೆ ಕರೆದಿದ್ದೇನೆ. ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸುತ್ತೇನೆ ಎಂದರು.

Key words:  Mandya-illegal mining-Former CM- HD Kumaraswamy