ಎನ್‌ಐಆರ್‌ಎಫ್ ರ್ಯಾಂಕಿಂಗ್: ಐಐಟಿ ಮಡ್ರಾಸ್‌ಗೆ ಸತತ ಮೂರನೇ ವರ್ಷ ಅತ್ಯುತ್ತಮ ಸಂಸ್ಥೆ ಎಂಬ ಹೆಗ್ಗಳಿಕೆ; ಬೆಂಗಳೂರಿನ ಐಐಎಸ್‌ಸಿ ಅತ್ಯುತ್ತಮ ಸಂಶೋಧನಾ ಕೇಂದ್ರ

 

ಬೆಂಗಳೂರು, ಸೆಪ್ಟೆಂಬರ್ ೧೩, ೨೦೨೧ (www.justkannada.in): ಕೇಂದ್ರ ಶಿಕ್ಷಣ ಇಲಾಖೆಯ ನ್ಯಾಷನಲ್ ಇನ್ಸ್ಟಿಟ್ಯೂಷನಲ್ ರ್ಯಾಂಕಿಂಗ್ ಫ್ರೇಂವರ್ಕ್ (ಎನ್‌ಐಆರ್‌ಎಫ್) ರ್ಯಾಂಕಿಂಗ್‌ಗಳ ಪ್ರಕಾರ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಸತತವಾಗಿ ಮೂರನೇ ವರ್ಷವೂ ಸಹ ಭಾರತದ ಅತ್ಯುತ್ತಮ ಐಐಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ಅತ್ಯುತ್ತಮ ಸಂಶೋಧನಾ ಕೇಂದ್ರವಾಗಿದೆ.

ಕೇಂದ್ರ ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ್ ಅವರು ಗುರುವಾರದಂದು ಎನ್‌ಐಆರ್‌ಎಫ್‌ನ ಆರನೇ ಆವೃತ್ತಿಯ ರ್ಯಾಂ ಕಿಂಗ್‌ಗಳನ್ನು ಘೋಷಿಸಿದರು.

ಅದರ ಪ್ರಕಾರ ಐಐಟಿ ಮಡ್ರಾಸ್, ಐಐಟಿ ಡೆಲ್ಲಿ, ಐಐಟಿ ಬಾಂಬೆ, ಐಐಟಿ ಖರಗ್‌ಪುರ್, ಐಐಟಿ ಕಾನ್‌ಪುರ್, ಐಐಟಿ ಗುವಹಾಟಿ ಹಾಗೂ ಐಐಟಿ ರೂರ್ಕಿ, ಈ ಏಳೂ ಐಐಟಿಗಳು ಮೊದಲ ೧೦ ಐಐಟಿಗಳೆಂದು ಗುರುತಿಸಲ್ಪಟ್ಟಿವೆ.

ಜವಾಹಾರ್‌ಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು) ಹಾಗೂ ಬನಾರಸ್ ಹಿಂದೂ ವಿಶ್ವವಿದ್ಯಾಲಯ (ಬಿಹೆಚ್‌ಯು) ಒಟ್ಟಾರೆ ರ್ಯಾಂಕಿಂಗ್‌ನಲ್ಲಿ ಕ್ರಮವಾಗಿ ಒಂಬತ್ತು ಹಾಗೂ ಹತ್ತನೇ ರ್ಯಾಂಕಿಂಗ್ ಅನ್ನು ಪಡೆದುಕೊಂಡಿದೆ.
ವಿಶ್ವವಿದ್ಯಾಲಯಗಳ ವಿಭಾಗದಲ್ಲಿ ಐಐಎಸ್‌ಸಿ ಬೆಂಗಳೂರು ಮೊದಲನೇ ಸ್ಥಾನವನ್ನು ಪಡೆದುಕೊಂಡಿರೆ, ಜೆಎನ್‌ಯು ಹಾಗೂ ಬಿಹೆಚ್‌ಯು ಕ್ರಮವಾಗಿ ಎರಡನೆ ಹಾಗೂ ಮೂರನೇ ಶ್ರೇಯಾಂಕವನ್ನು ಪಡೆದಿವೆ.

ಕೊಲ್ಕತ್ತಾ ವಿಶ್ವವಿದ್ಯಾಲಯ, ಅಮೃತಾ ವಿಶ್ವವಿದ್ಯಾಪೀಠಂ, ಜಾಮಿಯಾ ಮಿಲಿಯಾ ಇಸ್ಲಾಮಿಯಾ, ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್, ಜಾಧವ್‌ಪುರ್ ವಿಶ್ವವಿದ್ಯಾಲಯ, ಹೈದ್ರಾಬಾದ್ ವಿಶ್ವವಿದ್ಯಾಲಯ ಹಾಗೂ ಅಲಿಘಡ ಮುಸ್ಲಿಂ ವಿಶ್ವವಿದ್ಯಾಲಯಗಳು ವಿಶ್ವವಿದ್ಯಾಲಯಗಳ ವಿಭಾಗದಲ್ಲಿ ನಂತರದ ಸ್ಥಾನಗಳನ್ನು ಪಡೆದಿವೆ.

ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಿಳಿಸಿರುವಂತೆ, “ಸಂಸ್ಥೆಯ ಗುಣಮಟ್ಟ ಹಾಗೂ ಉತ್ಕೃಷ್ಟತೆಯನ್ನು ಆಧರಿಸಿ ಈ ರ್ಯಾಂಕಿಂಗ್‌ಗಳನ್ನು ನೀಡಲಾಗುತ್ತವೆ. ನಾವು ಈ ಪ್ರಾದೇಶಿಕ ರ್ಯಾಂಕಿಂಗ್ ಚೌಕಟ್ಟುಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಿ, ಈ ರ್ಯಾಂಕಿಂಗ್ ವ್ಯವಸ್ಥೆ ಕೇವಲ ನಮ್ಮ ದೇಶದಲ್ಲಷ್ಟೇ ಅಲ್ಲದೆ ವಿಶ್ವಮಟ್ಟದಲ್ಲಿ, ಅದರಲ್ಲೂ ವಿಶೇಷವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟಗಳಲ್ಲಿ ಮಾನ್ಯತೆ ಪಡೆಯುವಂತೆ ಖಾತ್ರಿಪಡಿಸಬೇಕಿದೆ. ಹೊಸ ಶಿಕ್ಷಣ ನೀತಿ (ಎನ್‌ಇಪಿ) ನಮ್ಮ ಶೈಕ್ಷಣಿಕ ವ್ಯವಸ್ಥೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡುವ ಅವಕಾಶವನ್ನು ಒದಗಿಸಲಿದೆ. ನಮ್ಮ ಚೌಕಟ್ಟಿನಡಿ ವ್ಯಾಪ್ತಿಯಡಿ ಹೆಚ್ಚು ಹೆಚ್ಚು ಶಿಕ್ಷಣ ಸಂಸ್ಥೆಗಳು ಬರುವಂತೆ ಮಾಡಲು ನಾವು ಸಂಘಟಿತ ಪ್ರಯತ್ನ ಮಾಡಬೇಕಿದೆ ಮತ್ತು ಭಾರತವನ್ನು ವಿಶ್ವಮಟ್ಟದಲ್ಲಿ ಅತ್ಯಂತ ಆದ್ಯತೆಯ ಶೈಕ್ಷಣಿಕ ಕೇಂದ್ರವನ್ನಾಗಿ ಗುರುತಿಸುವಂತೆ ಮಾಡಲು ಶ್ರಮಿಸಬೇಕಿದೆ,” ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಡ್ರಾಸ್, ದೆಹಲಿ, ಬಾಂಬೆ, ಕಾನ್‌ಪುರ್, ಖರಗ್‌ಪುರ್, ರೂರ್ಕಿ, ಗುವಹಾಟಿ ಹಾಗೂ ಹದ್ರಾಬಾದ್ ಈ ಎಂಟು ಐಐಟಿಗಳು ಇಂಜಿನಿಯರಿಂಗ್ ಸಂಸ್ಥೆಗಳ ವಿಭಾಗದಲ್ಲಿ ಮೊದಲ ೮ ಸ್ಥಾನಗಳನ್ನು ಆಕ್ರಮಿಸಿವೆ. ತಿರುಚಿರಾಪಳ್ಳಿ ಹಾಗೂ ಸೂರತ್‌ಕಲ್‌ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್‌ಐಟಿ) ಕ್ರಮವಾಗಿ ಈ ವಿಭಾಗದಡಿ ಒಂಬತ್ತು ಹಾಗೂ ಹತ್ತನೇ ಶ್ರೇಯಾಂಕವನ್ನು ಪಡೆದುಕೊಂಡಿವೆ. ಕಾಲೇಜುಗಳ ವಿಭಾಗದಲ್ಲಿ ಮಿರಾಂಡ ಹೌಸ್ ಕಾಲೇಜು ದೇಶದ ಅತ್ಯುತ್ತಮ ಕಾಲೇಜು ಎಂಬ ರ್ಯಾಂಕಿಂಗ್ ಪಡೆದುಕೊಂಡಿದ್ದರೆ, ಲೇಡಿ ಶ್ರೀ ರಾಂ ಮಹಿಳೆಯರ ಕಾಲೇಜು ಹಾಗೂ ಲೊಯೊಲಾ ಕಾಲೇಜು, ಚೆನ್ನೈ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳನ್ನು ಪಡೆದಿವೆ.
ಕೋಲ್ಕತ್ತಾದ ಸೆಂಟ್ ಜೇವಿರ್ಸ್ ಕಾಲೇಜು; ರಾಮಕೃಷ್ಣ ಮಿಷನ್ ವಿದ್ಯಾಮಂದಿರ, ಹೌರಾ; ಪಿಜಿಎಸ್‌ಆರ್ ಕೃಷ್ಣಮ್ಮಾಳ್ ಮಹಿಳೆಯರ ಕಾಲೇಜು, ಕೊಯಮತ್ತೂರು; ಪ್ರೆಸಿಡೆನ್ಸಿ ಕಾಲೇಜು, ಚೆನ್ನೈ ಕ್ರಮವಾಗಿ ನಾಲ್ಕು, ಐದು, ಆರು ಮತ್ತು ಏಳನೇ ಸ್ಥಾನಗಳನ್ನು ಪಡೆದುಕೊಂಡಿವೆ.

ದೆಹಲಿಯ ಸೆಂಟ್ ಸ್ಟೀಫನ್ ಕಾಲೇಜು, ಹಿಂದೂ ಕಾಲೇಜು ಹಾಗೂ ಶ್ರೀ ರಾಂ ಕಾಲೇಜ್ ಆಫ್ ಕಾಮರ್ಸ್ ಇವುಗಳು ಕ್ರಮವಾಗಿ ಎಂಟು, ಒಂಬತ್ತು ಹಾಗೂ ೧೦ನೇ ಶ್ರೇಯಾಂಕವನ್ನು ಪಡೆದಿವೆ. ದೇಶದ ಅತ್ಯುತ್ತಮ ಬಿ-ಸ್ಕೂಲ್‌ಗಳ ವಿಭಾಗದಲ್ಲಿ ಐಐಎಂ ಅಹ್ಮದಾಬಾದ್, ಬೆಂಗಳೂರು ಹಾಗೂ ಕೋಲ್ಕತ್ತಾ ಕ್ರಮವಾಗಿ ತನ್ನ ಮೊದಲು, ಎರಡು ಹಾಗೂ ಮೂರನೇ ಸ್ಥಾನಗಳನ್ನು ಭದ್ರಪಡಿಸಿಕೊಂಡಿವೆ.
ಫಾರ್ಮಸಿ ವಿಭಾಗದಡಿ ದೆಹಲಿಯ ಜಾಮಿಯಾ ಹಮ್‌ದರ್ದ್ ಮೊದಲ ಸ್ಥಾನ ಪಡೆದುಕೊಂಡರೆ, ಪಂಜಾಬ್ ವಿಶ್ವವಿದ್ಯಾಲಯ, ಚಂಡೀಘಡ ಹಾಗೂ ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ (ಬಿಐಟಿಎಸ್), ಪಿಲಾನಿ ನಂತರದ ಸ್ಥಾನವನ್ನು ಪಡದಿದೆ.
ವೈದ್ಯಕೀಯ ಕಾಲೇಜುಗಳ ಪೈಕಿ, ದೆಹಲಿಯ ಎಐಐಎಮ್‌ಎಸ್ ಮೊದಲ ಸ್ಥಾನ, ಪಿಜಿಐಎಂಇಆರ್, ಚಂಡೀಘಡ ಹಾಗೂ ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜುಗಳು ನಂತರದ ಸ್ಥಾನಗಳನ್ನು ಪಡೆದುಕೊಂಡಿವೆ.

ಈ ರ್ಯಾಂಕಿಂಗ್ ಚೌಕಟ್ಟು ಶಿಕ್ಷಣ ಸಂಸ್ಥೆಗಳನ್ನು ಐದು ವಿಸ್ತೃತ ಮಾನದಂಡಗಳಡಿ ಮೌಲ್ಯಮಾಪನ ಮಾಡುತ್ತದೆ, ಅವುಗಳೆಂದರೆ; ಶಿಕ್ಷಣ, ಕಲಿಕೆ ಹಾಗೂ ಸಂಪನ್ಮೂಲಗಳು (ಟಿಎಲ್‌ಆರ್), ಸಂಶೋಧನೆ ಹಾಗೂ ವೃತ್ತಿಪರ ಅಭ್ಯಾಸ (ಆರ್‌ಪಿ), ಪದವಿ ಪರಿಣಾಮಗಳು (ಜಿಒ), ಔಟ್‌ರೀಚ್ ಮತ್ತು ಇನ್‌ಕ್ಲೂಸಿವಿಟಿ (ಒಐ) ಹಾಗೂ ಪರ್‌ಸೆಪ್ಷನ್ (ಪಿಆರ್).

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

key words : nirf-ranking-iit-madras-best-institution-third-year-in-row-iisc-bengaluru-best-for-research