Monday, October 12, 2026

Dasara Wishes

ನರೇಂದ್ರ ಮೋದಿ ಮೆಂಟಲಿ ವೀಕ್, ಅತ್ಯಂತ ದುರ್ಬಲ ಪ್ರಧಾನಿ- ಸಚಿವ ಆರ್.ಬಿ ತಿಮ್ಮಾ...
Happy Dasara
Home Front Page ಮೈಸೂರಿನಲ್ಲಿ ನಿಫಾ ವೈರಸ್ ಸೋಂಕಿತರು ಪತ್ತೆಯಾಗಿಲ್ಲ- ಡಿಸಿ ಬಗಾದಿ ಗೌತಮ್.

ಮೈಸೂರಿನಲ್ಲಿ ನಿಫಾ ವೈರಸ್ ಸೋಂಕಿತರು ಪತ್ತೆಯಾಗಿಲ್ಲ- ಡಿಸಿ ಬಗಾದಿ ಗೌತಮ್.

ಮೈಸೂರು,ಸೆಪ್ಟಂಬರ್,8,2021(www.justkannada.in): ಮೈಸೂರಿನಲ್ಲಿ ನಿಫಾ ವೈರಸ್ ಸೋಂಕಿತರು ಪತ್ತೆಯಾಗಿಲ್ಲ. ಸದ್ಯಕ್ಕೆ ಮೈಸೂರಿನಲ್ಲಿ ನಿಫಾ ವೈರಸ್ ಆತಂಕವಿಲ್ಲ‌ ಎಂದು ಮೈಸೂರು ಜಿಲ್ಲಾಧಿಕಾರಿ ಬಗಾದಿ ಗೌತಮ್ ತಿಳಿಸಿದ್ದಾರೆ.

ನಿಫಾ ವೈರಸ್ ಆತಂಕ ಕುರಿತು ಮಾತನಾಡಿದ ಡಿಸಿ ಬಗಾದಿ ಗೌತಮ್, ಅಕ್ಟೋಬರ್‌ ವರೆಗೂ ಕೇರಳ ಪ್ರವಾಸ, ಕೇರಳಿಗರ ಪ್ರವಾಸ ಮಾಡದಿದ್ದರೆ ಸೂಕ್ತ. ಗಡಿ ಭಾಗದಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಕರ ಪತ್ರದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.

ಗಡಿ ಭಾಗದಲ್ಲಿ ತಪಾಸಣೆ ಮಾಡಲಾಗುತ್ತಿದ್ದು, ಕೋವಿಡ್ ನೆಗೆಟಿವ್ ವರದಿ ಇದ್ದವರಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ. ಸರ್ಕಾರದ ಮಾರ್ಗಸೂಚಿಯನ್ನ ಕಟ್ಟುನಿಟ್ಟಿನ ಪಾಲನೆಗೆ ಸೂಚನೆ ನೀಡಲಾಗಿದೆ ಎಂದು ಡಿಸಿ ಬಗಾದಿ ಗೌತಮ್ ತಿಳಿಸಿದ್ದಾರೆ.

Key words: Nifa virus -infected – Mysore- DC Bagadi Gautam