Wednesday, July 29, 2026

BDA Apartments

Home Front Page ನಾನು ಸೈಲೆಂಟ್ ಇರಬಹುದು, ಕೆಲಸದ ವಿಚಾರದಲ್ಲಿ ಸುಮ್ಮನಿರಲ್ಲ- ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಕ್ಲಾಸ್.

ನಾನು ಸೈಲೆಂಟ್ ಇರಬಹುದು, ಕೆಲಸದ ವಿಚಾರದಲ್ಲಿ ಸುಮ್ಮನಿರಲ್ಲ- ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಕ್ಲಾಸ್.

ಬೆಂಗಳೂರು,ಆಗಸ್ಟ್,31,2021(www.justkannada.in): ಆಡಳಿತದಲ್ಲಿ ಚುರುಕುಮುಟ್ಟಿಸಲು ಮುಂದಾಗಿರುವ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳನ್ನ ತರಾಟೆ ತೆಗೆದುಕೊಂಡಿದ್ದಾರೆ.

ವಿಕಾಸಸೌಧದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಿಎಂ ಬಸವರಾಜ ಬೊಮ್ಮಾಯಿ, ಸಭೆಯಲ್ಲಿ ಸಿಎಂ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳ ಅನುಷ್ಠಾನ ಸರಿಯಾಗಿ ಆಗುತ್ತಿಲ್ಲ.  ಅನುಷ್ಠಾನದಲ್ಲಿ ಅಧಿಕಾರಿಗಳು ಸರಿಯಾಗಿ ತೊಡಗಿಸಿಕೊಳ್ಳುತ್ತಿಲ್ಲ. ಇದರಿಂದ ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಇನ್ನುಮುಂದೆ ಇದಕ್ಕೆಲ್ಲಾ ನಾನು ಅವಕಾಶ ಕೊಡುವುದಿಲ್ಲ. ನಾನು ಸೈಲೆಂಟ್ ಇರಬಹುದು, ಆದರೆ ಕೆಲಸದ ವಿಚಾರದಲ್ಲಿ ಸುಮ್ಮನಿರಲ್ಲ ಎಂದು ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಕ್ಲಾಸ್ ತೆಗೆದುಕೊಂಡಿದ್ದಾರೆ.

ನೀವು ಮಾಡೋ ಕೆಲಸಕ್ಕೆ ಸರ್ಕಾರಕ್ಕೆ ಮುಜುಗರ. ಹಾಗಾಗಿ ಪ್ರತಿಯೊಂದು ಕೆಡಿಪಿ ಸಭೆ ನಾನೇ  ತೆಗೆದುಕೊಳ್ಳುತ್ತೇನೆ. ಕೆಲಸ ಮಾಡುವ ಇಚ್ಚಾಶಕ್ತಿ ಇರಬೇಕು. ಸರ್ಕಾರಕ್ಕೆ ಕೆಟ್ಟ ಹೆಸರು ಬರುವುದಕ್ಕೆ  ನಾನು ಬಿಡುವುದಿಲ್ಲ ಎಂದು ಸಿಎಂ ಬೊಮ್ಮಾಯಿ ಅಧಿಕಾರಿಗಳ ವಿರುದ್ಧ ಗರಂ ಆದ ಗಟನೆ ನಡೆಯಿತು.

Key words: Silent- work- CM-basavaraj Bommai -class -officers.