Wednesday, August 26, 2026

BDA Apartments

Home Front Page ಸೆಪ್ಟೆಂಬರ್ 10ರಂದು ರಿಲಯನ್ಸ್ ಜಿಯೋದಿಂದ ಅಗ್ಗದ ಸ್ಮಾರ್ಟ್ ಫೋನ್ ರಿಲೀಸ್

ಸೆಪ್ಟೆಂಬರ್ 10ರಂದು ರಿಲಯನ್ಸ್ ಜಿಯೋದಿಂದ ಅಗ್ಗದ ಸ್ಮಾರ್ಟ್ ಫೋನ್ ರಿಲೀಸ್

ಬೆಂಗಳೂರು. ಆಗಸ್ಟ್ 28, 2021 (www.justkannada.in): ರಿಲಯನ್ಸ್ ಜಿಯೋ ಸೆಪ್ಟೆಂಬರ್ 10ರಂದು ಅಗ್ಗದ 4G ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಿದೆ.

ಹಲವಾರು ಆನ್‌ಲೈನ್ ವರದಿಗಳ ಪ್ರಕಾರ, ಜಿಯೋಫೋನ್ ನೆಕ್ಸ್ಟ್‌ನ ಬೆಲೆ ರೂ 3,499 ಆಗಿರಬಹುದು ಎನ್ನಲಾಗಿದೆ.

ಇದನ್ನು ಜಿಯೋಫೋನ್ ನೆಕ್ಸ್ಟ್‌ ಎಂದು ಕರೆಯಲಾಗುತ್ತಿದ್ದು, ರಿಲಯನ್ಸ್ ಜಿಯೋ ಮತ್ತು ಗೂಗಲ್ ಎರಡೂ ಅಭಿವೃದ್ಧಿಪಡಿಸಿದೆ.

ಸ್ಮಾರ್ಟ್‌ಫೋನ್‌ನ ಹಲವು ವಿಶೇಷತೆಗಳು ಸಹ ಸೋರಿಕೆಯಾಗಿವೆ. ಜಿಯೋಫೋನ್ ನೆಕ್ಸ್ಟ್ ಆಂಡ್ರಾಯ್ಡ್ 11 ಗೋ ಆವೃತ್ತಿಯಲ್ಲಿ ಕೆಲಸ ಮಾಡುವ ನಿರೀಕ್ಷೆಯಿದೆ. ಇದಲ್ಲದೆ, ಸ್ಮಾರ್ಟ್‌ಫೋನ್‌ 5.5 ಇಂಚಿನ ಡಿಸ್‌ಪ್ಲೇಯನ್ನು ಒಳಗೊಂಡಿರುತ್ತದೆ ಎನ್ನಲಾಗಿದೆ.

3GB RAM ಮತ್ತು 32GB ಇಂಟರ್‌ನಲ್ ಸ್ಟೋರೆಜ್ ಹೊಂದಿದೆ. 13MP ಹಿಂಭಾಗದ ಸೆನ್ಸರ್ ಕ್ಯಾಮೆರಾ ಮತ್ತು 8MP ಫ್ರಂಟ್ ಸೆನ್ಸರ್‌ನೊಂದಿಗೆ ಬರುವ ನಿರೀಕ್ಷೆಯಿದೆ.