Friday, August 28, 2026

BDA Apartments

Home Cinema ನಟ ಅಜಯ್ ರಾವ್ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಇಂದು

ನಟ ಅಜಯ್ ರಾವ್ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಇಂದು

ಬೆಂಗಳೂರು, ಆಗಸ್ಟ್ 26, 2021 (www.justkannada.in): ನಟ ಅಜೇಯ್ ರಾವ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೋರ್ಟ್ ಇಂದು ವಿಚಾರಣೆ ನಡೆಸಲಿದೆ.

ಲವ್ ಯೂ ರಚ್ಚು ಚಿತ್ರೀಕರಣ ವೇಳೆ ಫೈಟರ್ ವಿವೇಕ್ ದುರಂತ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಜೇಯ್ ರಾವ್ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.

ಚಿತ್ರೀಕರಣ ವೇಳೆ ಸ್ಥಳದಲ್ಲಿದ್ದ ನಟ ಅಜೇಯ್ ರಾವ್ ಗೆ ಬಂಧನ ಭೀತಿಯಿದೆ. ರಾಮನಗರದ 3 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ.

ಚಿತ್ರದ ನಿರ್ದೇಶಕ ಶಂಕರ್, ಸ್ಟಂಟ್ ಮಾಸ್ಟರ್ ವಿನೋದ್, ಕ್ರೇನ್ ಅಪರೇಟರ್ ಮಹದೇವ್ ನ್ಯಾಯಾಂಗ ಬಂಧನಲ್ಲಿದ್ದಾರೆ.