Sunday, August 23, 2026

BDA Apartments

Home Cinema ಸಾಯಿ ಪಲ್ಲವಿಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಮಂಸೋರೆ

ಸಾಯಿ ಪಲ್ಲವಿಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಮಂಸೋರೆ

ಬೆಂಗಳೂರು, ಆಗಸ್ಟ್ 19, 2021 (www.justkannada.in): ಕನ್ನಡದ ನಿರ್ದೇಶಕ ಮಂಸೋರೆ ಕಥೆ ಕೇಳಿ ದಕ್ಷಿಣ ಭಾರತದ ಸ್ಟಾರ್ ನಟಿ ಸಾಯಿ ಪಲ್ಲವಿ ಖುಷಿಯಾಗಿದ್ದಾರೆ.

ಈ ಮೂಲಕ ತಮ್ಮ ಮಂದಿನ ಸಿನಿಮಾವನ್ನು ದಕ್ಷಿಣ ಭಾರತದ ಸ್ಟಾರ್ ನಟಿಯೊಟ್ಟಿಗೆ ಮಾಡಲಿದ್ದಾರೆ ಮಂಸೋರೆ.
ಮಲಯಾಳಂನ ‘ಪ್ರೇಮಂ’ ಮೂಲಕ ಸ್ಟಾರ್ ಪಟ್ಟ ಗಳಿಸಿದ ಸಾಯಿ ಪಲ್ಲವಿ ಮಂಸೋರೆ ಸಿನಿಮಾ ಮಾಡುವ ಸಾಧ್ಯತೆಗಳು ದಟ್ಟವಾಗಿವೆ.

‘ಆಕ್ಟ್ 1987’ ಸಿನಿಮಾದ ಯಶಸ್ಸಿನಿಂದಾಗಿ ಮಂಸೋರೆಯೊಟ್ಟಿಗೆ ಸಿನಿಮಾ ಮಾಡಲು ಹಲವು ನಿರ್ಮಾಪಕರು ಸಂಪರ್ಕಿಸಿದ್ದು, ಅವರಲ್ಲೊಬ್ಬರಿಗಾಗಿ ಮಾಡಲಾಗುತ್ತಿರುವ ಸಿನಿಮಾದಲ್ಲಿ ಸಾಯಿ ಪಲ್ಲವಿ ನಾಯಕಿಯಾಗಲಿದ್ದಾರೆ ಎನ್ನಲಾಗಿದೆ.

ರಾಜಕೀಯ ಥ್ರಿಲ್ಲರ್ ಕತೆಯನ್ನು ಮಂಸೋರೆ ಹೆಣೆಯುತ್ತಿದ್ದು ಈ ಸಿನಿಮಾದಲ್ಲಿ ನಾಯಕಿಯಾಗಿ ಸಾಯಿ ಪಲ್ಲವಿ ನಟಿಸಲಿದ್ದಾರೆ ಎನ್ನಲಾಗಿದೆ. ಆದರೆ ಈ ವಿಷಯ ಅಧಿಕೃತವಾಗಿ ಖಚಿತವಾಗಿಲ್ಲ.