Sunday, August 9, 2026

BDA Apartments

Home Cinema ವಿಶೇಷ ಸೆಟ್ ನಲ್ಲಿ ‘‘ಸಪ್ತಸಾಗರದಾಚೆಯೆಲ್ಲೊ’’ ಶೂಟಿಂಗ್ ರೀ ಸ್ಟಾರ್ಟ್

ವಿಶೇಷ ಸೆಟ್ ನಲ್ಲಿ ‘‘ಸಪ್ತಸಾಗರದಾಚೆಯೆಲ್ಲೊ’’ ಶೂಟಿಂಗ್ ರೀ ಸ್ಟಾರ್ಟ್

ಬೆಂಗಳೂರು, ಆಗಸ್ಟ್ 19, 2021 (www.justkannada.in): ವಿಶೇಷ ಸೆಟ್ ನಲ್ಲಿ ಶೂಟಿಂಗ್ ಆರಂಭಿಸಿದೆ ‘ಸಪ್ತಸಾಗರದಾಚೆಯೆಲ್ಲೊ’ ಚಿತ್ರತಂಡ.

ಹೌದು. ರಕ್ಷಿತ್ ಶೆಟ್ಟಿ ಅಭಿನಯದ ‘ಸಪ್ತಸಾಗರದಾಚೆಯೆಲ್ಲೊ’ ಚಿತ್ರದ ಮುಂದಿನ ಹಂತದ ಚಿತ್ರೀಕರಣ ಮುಂದಿನ 35 ದಿನ ನಡೆಯಲಿದೆ ಎನ್ನಲಾಗಿದೆ.

ಇದಕ್ಕಾಗಿ ಬೆಂಗಳೂರಿನಲ್ಲಿ ವಿಶೇಷ ಸೆಟ್ ಹಾಕಲಾಗಿದ್ದು, ರಕ್ಷಿತ್ ಶೆಟ್ಟಿ ಆ್ಯಂಡ್ ಟೀಂ ಶೂಟಿಂಗ್ ಕೆಲಸದಲ್ಲಿ ತಲ್ಲೀನವಾಗಿದೆ.

ಕೊರೋನಾದಿಂದಾಗಿ ಶೂಟಿಂಗ್ ಇಷ್ಟು ದಿನ ಮುಂದೂಡಿಕೆಯಾಗಿತ್ತು. ಇದೀಗ ಮತ್ತೆ ಚಿತ್ರೀಕರಣ ಕಾರ್ಯದಲ್ಲಿ ನಿರ್ದೇಶಕ ಹೇಮಂತ್ ರಾವ್ ಬ್ಯುಸಿಯಾಗಿದ್ದಾರೆ. ಅಂದಹಾಗೆ ಚಿತ್ರದಲ್ಲಿ ರಕ್ಷಿತ್’ಗೆ ರುಕ್ಮಿಣಿ ನಾಯಕಿ.