Sunday, August 23, 2026

BDA Apartments

Home Crime ಮೈಸೂರಿನಲ್ಲಿ ಸಾರ್ವಜನಿಕರಿಗೆ ವಂಚಿಸುತ್ತಿದ್ದ ನಕಲಿ ಅಧಿಕಾರಿಯ ಬಂಧನ.

ಮೈಸೂರಿನಲ್ಲಿ ಸಾರ್ವಜನಿಕರಿಗೆ ವಂಚಿಸುತ್ತಿದ್ದ ನಕಲಿ ಅಧಿಕಾರಿಯ ಬಂಧನ.

ಮೈಸೂರು,ಆಗಸ್ಟ್,17,2021(www.justkannada.in): ತಾನು ರೆವಿನ್ಯೂ ಇನ್ಸ್ ಪೆಕ್ಟರ್ ಎಂದು ಹೇಳಿ ಸಾರ್ವಜನಿಕರಿಗೆ ವಂಚಿಸುತ್ತಿದ್ದ ನಕಲಿ ಅಧಿಕಾರಿಯನ್ನ ಬಂಧಿಸಲಾಗಿದೆ.

ಮೈಸೂರಿನ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೈಸೂರಿನ ವಿದ್ಯಾರಣ್ಯಪುರಂನ ನಿವಾಸಿ ಕಾರ್ತಿಕ್ ಬಂಧಿತ ಆರೋಪಿ. ಈತ ರೆವಿನ್ಯೂ ಇನ್ಸ್ ಪೆಕ್ಟರ್ ಎಂದು ಹೇಳಿ ಕಳೆದ 2 ತಿಂಗಳಿಂದ ಸಾರ್ವಜನಿಕರನ್ನು ವಂಚಿಸುತ್ತಿದ್ದ.

ಇಂದು ಹೆಬ್ಬಾಳದ ಸೂರ್ಯ ಬೇಕರಿಯ ಬಳಿ ಕಾರ್ತಿಕ್ ಬಲೆಗೆ ಬಿದ್ದಿದ್ದಾನೆ. ಆರ್ ಕೆ ಗಿಫ್ಟ್ ಸೆಂಟರ್ ನಲ್ಲಿ ವಂಚನೆ ಮಾಡುವಾಗ ವಲಯ ಕಚೇರಿ ಅಧಿಕಾರಿಗಳ ಕೈಗೆ  ಕಾರ್ತಿಕ್ ಸಿಕ್ಕಿಬಿದ್ದಿದ್ದಾನೆ. ಈ ಕುರಿತು ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: arrest -fake officer -cheating – public – Mysore.