Friday, September 11, 2026

BDA Apartments

Home Front Page ಲಾರ್ಡ್ಸ್’ನಲ್ಲಿ ಹಲವು ದಾಖಲೆ ಬರೆದ ಕನ್ನಡಿಗ ಕೆ.ಎಲ್.ರಾಹುಲ್ ಶತಕ

ಲಾರ್ಡ್ಸ್’ನಲ್ಲಿ ಹಲವು ದಾಖಲೆ ಬರೆದ ಕನ್ನಡಿಗ ಕೆ.ಎಲ್.ರಾಹುಲ್ ಶತಕ

ಬೆಂಗಳೂರು, ಆಗಸ್ಟ್ 13, 2021 (www.justkannada.in): ಕನ್ನಡಿಗ ಕೆ.ಎಲ್.ರಾಹುಲ್ ಲಾರ್ಡ್ಸ್’ನಲ್ಲಿ ಶತಕ ಬಾರಿಸಿ ಹಲವು ದಾಖಲೆ ಬರೆದಿದ್ದಾರೆ.

ರಾಹುಲ್ ಮೊದಲ ದಿನ ಲಾರ್ಡ್ಸ್ ಟೆಸ್ಟ್ ಮೊದಲ ದಿನ ಅಜೇಯ 127 ರನ್ ಗಳಿಸಿದ್ದು, ಕಳೆದ ಮೂರು ವರ್ಷದಲ್ಲಿ ವಿದೇಶದಲ್ಲಿ ಶತಕ ಬಾರಿಸಿದ ಭಾರತದ ಮೊದಲ ಆರಂಭಿಕ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.

ಏಶ್ಯಾದಿಂದ ಹೊರಕ್ಕೆ ಹೆಚ್ಚು ಟೆಸ್ಟ್ ಶತಕ ಬಾರಿಸಿದವರ ಪಟ್ಟಿಯಲ್ಲಿ ರಾಹುಲ್ ಈಗ ಸೆಹವಾಗ್ ಜೊತೆ ಜಂಟಿಯಾಗಿ ಎರಡನೇ ಸ್ಥಾನಕ್ಕೇರಿದರು.

ಸೆಹವಾಗ್ ಮತ್ತು ರಾಹುಲ್ ತಲಾ ನಾಲ್ಕು ಶತಕ ಬಾರಿಸಿದ್ದಾರೆ. ಸುನೀಲ್ ಗಾವಸ್ಕರ್ ಮೊದಲ ಸ್ಥಾನದಲ್ಲಿದ್ದು, ಅವರು 15 ಶತಕ ಗಳಿಸಿದ್ದಾರೆ.