ಮೈಸೂರು ಮಹಾನಗರ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಪೌರಕಾರ್ಮಿಕರ ಸಮಸ್ಯೆ ಬಗ್ಗೆ ಚರ್ಚೆ: ಮಾಸ್ಕ್ ಧರಿಸದ ಬಹುತೇಕ ಸದಸ್ಯರು..?

ಮೈಸೂರು,ಆಗಸ್ಟ್,10,2021(www.justkannada.in):  ಮೈಸೂರು ಮಹಾನಗರ ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ  ಪಾಲಿಕೆಯ ಬಹುತೇಕ ಸದಸ್ಯರು ಮಾಸ್ಕ್ ಧರಿಸದೆ ನಿಯಮ ಉಲ್ಲಂಘಿಸಿರುವ ಆರೋಪ ಕೇಳಿ ಬಂದಿದೆ.

ಕಳೆದ ವಾರದ ಕೌನ್ಸಿಲ್ ಸಭೆ ಇಂದು ಮುಂದುವರಿಕೆಯಾಗಿದ್ದು, ಹಂಗಾಮಿ ಮೇಯರ್ ಅನ್ವರ್ ಬೇಗ್ ಅಧ್ಯಕ್ಷತೆಯಲ್ಲಿ ಸಭೆ ಆರಂಭವಾಯಿತು. ಸಭೆಯಲ್ಲಿ ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ ಹಾಗೂ ಪಾಲಿಕೆ ಸದಸ್ಯರು ಭಾಗಿಯಾಗಿದ್ದರು.

ಸಭೆಯಲ್ಲಿ  ಪಾಲಿಕೆ ಸದಸ್ಯರಲ್ಲಿ ಬಹುತೇಕರು ಮಾಸ್ಕ್ ಧರಿಸದೆ ಕೋವಿಡ್ ನಿಯಮ ಉಲ್ಲಂಘನೆ ಮಾಡಿದ್ದಾರೆ ಎನ್ನಲಾಗಿದೆ. ಸಾರ್ವಜನಿಕರಿಗೆ ಅರಿವು ಮೂಡಿಸಬೇಕಾದ ಜವಾಬ್ದಾರಿಯುತ ಸದಸ್ಯರೇ ಕೋವಿಡ್ ನಿಯಮ ಪಾಲಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಪೌರ ಕಾರ್ಮಿಕರ ಸಮಸ್ಯೆ ಬಗ್ಗೆ ಸದಸ್ಯೆ ಪ್ರಸ್ತಾಪ

ಮೈಸೂರಿನ ಪೌರ ಕಾರ್ಮಿಕರ ಸಮಸ್ಯೆ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದ ಪಾಲಿಕೆ ಸದಸ್ಯೆ ಸುನಂದ ಪಾಲನೇತ್ರ, ಮೈಸೂರು ನಗರದಲ್ಲಿ ಪೌರಕಾರ್ಮಿಕರಿಗೆ ಸಾಕಷ್ಟು ಸಮಸ್ಯೆ ಇದೆ. ಮನೆಯಲ್ಲೆ ಕುಳಿತು ಆನ್ ಲೈನ್ ನಲ್ಲಿ ಪೌರಕಾರ್ಮಿಕರಿಗೆ ಕೆಲಸ ಹೇಳ್ತಾ ಇದಾರೆ. ಹತ್ತು ಗಂಟೆ ನಂತರ ಯಾವುದೇ ಮೇಸ್ತ್ರಿಗಳು , ಹೆಲ್ತ ಇನ್ಸ್ ಪೆಕ್ಟರ್ ಗಳು ಇರಲ್ಲ. ಅಟೆಂಡೆನ್ಸ್ ತೆಗೆದುಕೊಂಡು ಮನೆಗೆ ಹೋಗ್ತಾರೆ. ಪೌರಕಾರ್ಮಿಕರ ಸಮಸ್ಯೆ ಯಾರೂ ಕೇಳೊಲ್ಲ. 30 ದಿನ ಅಟೆಂಡೆನ್ಸ್ ಕೊಟ್ಟು ಕಮಿಷನ್ ತಗೋತಾರೆ ಎಂದು ಆರೋಪಿಸಿದರು.

ಕೌನ್ಸಿಲ್ ಸಭೆಯಲ್ಲಿ ಪೊಲೀಸ್ ಆಯುಕ್ತರ ಆಸನದಲ್ಲಿ ಕುಳಿತ ಅನಾಮದೇಯ ವ್ಯಕ್ತಿ.

ಕೌನ್ಸಿಲ್ ಸಭೆಯಲ್ಲಿ ಅನಾಮದೇಯ ವ್ಯಕ್ತಿ ಕಾಣಿಸಿಕೊಂಡಿದ್ದು ಆ ವ್ಯಕ್ತಿ ಪೊಲೀಸ್ ಆಯುಕ್ತರ ಆಸನದಲ್ಲಿ ಕುಳಿತ ಘಟನೆ ನಡೆಯಿತು. ಆತ ಮಾನಸಿಕ ಅಸ್ವಸ್ಥನಂತೆ  ಕಾಣುತ್ತಿದ್ದು ಆತನನ್ನ ನೋಡಿ ಅಧಿಕಾರಿಗಳು ತಬ್ಬಿಬ್ಬಾದರು. ಇನ್ನು ಸಿಬ್ಬಂದಿಗಳು ಅನಾಮಾದೇಯ ವ್ಯಕ್ತಿಯನ್ನು ಸಭೆಯಿಂದ ಹೊರಗೆ ಕಳುಹಿಸಿದರು.

Key words: Mysore city corporation-council –meeting