Thursday, August 6, 2026

BDA Apartments

Home Front Page ಇದೇ ಖಾತೆ ಬೇಕು ಎಂದು ಕೇಳೋದು ತಪ್ಪು- ಅಸಮಾಧಾನಿತ ಸಚಿವರಿಗೆ ಸಚಿವ ಮುನಿರತ್ನ ಟಾಂಗ್.

ಇದೇ ಖಾತೆ ಬೇಕು ಎಂದು ಕೇಳೋದು ತಪ್ಪು- ಅಸಮಾಧಾನಿತ ಸಚಿವರಿಗೆ ಸಚಿವ ಮುನಿರತ್ನ ಟಾಂಗ್.

ಬೆಂಗಳೂರು,ಆಗಸ್ಟ್,9,2021(www.justkannada.in):  ಖಾತೆ ಹಂಚಿಕೆ ಬಳಿಕ ತಮಗೆ ಸಿಕ್ಕಿರುವ ಖಾತೆ ಬಗ್ಗೆ ಅಸಮಾಧಾನ ಹೊರ ಹಾಕಿರುವ ಸಚಿವರಾದ ಆನಂದ್ ಸಿಂಗ್ ಮತ್ತು ಎಂಟಿಬಿ ನಾಗರಾಜ್ ಗೆ ಸಚಿವ ಮುನಿರತ್ನ ಪರೋಕ್ಷ ಟಾಂಗ್ ನೀಡಿದ್ದಾರೆ.

ಇದೇ ಖಾತೆ ನೀಡಿ ಎಂದು ಕೇಳೊದು ತಪ್ಪು. ಬೇಕಿದ್ದರೇ ಖಾತೆ ಇರುವವರ ಬಳಿ ಹೋಗಿ ಕೇಳಲಿ. ಆದತೆ ಇದೇ ಖಾತೆ ಬೇಕು ಎಂದು ಕೇಳೊದು ಸರಿಯಲ್ಲ ಎಂದು ಸಚಿವ ಮುನಿರತ್ನ ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಸಚಿವ ಮುನಿರತ್ನ, ಮೊದಲು ರಾಜೀನಾಮೆ ನೀಡಿದ್ದು ಆನಂದ್ ಸಿಂಗ್. ಹೀಗಾಗಿ ಇದೇ ಖಾತೆ ಬೇಕು ಅಂತಾ ಕೇಳುವುದರಲ್ಲಿ ನ್ಯಾಯವಿದೆ. ನಾವು 17 ಮಂದಿ ವಲಸಿಗರಾಗಿ ಬಂದಿದ್ದೇವೆ. ಆಗಂತ ಅತಿಕ್ರಮಣ ಮಾಡೋದು ಸರಿಯಲ್ಲ. ನಾವು 5 ವರ್ಷ ಪಕ್ಷಕ್ಕಾಗಿ ದುಡಿಯಬೇಕು. ಆ ನಂತರ ಇದೇ ಖಾತೆ ಬೇಕು ಎಂದು ಕೇಳಲಿ. ಆದರೆ ಈಗ ಕೇಳಿದರೆ ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದರು.

Key words : department-minister-Munirath’-Tong -unhappy Minister.