Sunday, August 30, 2026

BDA Apartments

Home Front Page ನನ್ನ ನಸೀಬು ಚೆನ್ನಾಗಿದ್ರೆ ನಾನೂ ಸಿಎಂ ಆಗ್ತೇನೆ- ಸಚಿವ ಉಮೇಶ್ ಕತ್ತಿ.

ನನ್ನ ನಸೀಬು ಚೆನ್ನಾಗಿದ್ರೆ ನಾನೂ ಸಿಎಂ ಆಗ್ತೇನೆ- ಸಚಿವ ಉಮೇಶ್ ಕತ್ತಿ.

ಬಾಗಲಕೋಟೆ,ಆಗಸ್ಟ್,6,2021(www.justkannada.in):  ನನಗೆ ಬಿಜೆಪಿಯಲ್ಲಿ ಇನ್ನು 15 ವರ್ಷ ಅವಕಾಶ ಇದೆ. ನಸೀಬು ಇದ್ದರೇ ನಾನೂ ಸಿಎಂ ಆಗುತ್ತೇನೆ ಎಂದು ಸಚಿವ ಉಮೇಶ್ ಕತ್ತಿ ತಿಳಿಸಿದ್ದಾರೆ.

ಬಾಗಲಕೋಟೆಯಲ್ಲಿ ಮಾತನಾಡಿದ ಸಚಿವ ಉಮೇಶ್ ಕತ್ತಿ. ರಾಜ್ಯಕ್ಕೆ ಒಬ್ಬರು ಸಿಎಂ ಆಗಬೇಕು. ಈಗ ಬೊಮ್ಮಾಯಿ ಆಗಿದ್ದಾರೆ. ಅವರ ನಸೀಬು ಚೆನ್ನಾಗಿತ್ತು. ಹೀಗಾಗಿ ಮುಖ್ಯಮಂತ್ರಿಯಾಗಿದ್ದಾರೆ. ಮುಂದೆ ನನ್ನ ನಸೀಬು ಚೆನ್ನಾಗಿ ಇದ್ದರೆ ನಾನೂ ಸಿಎಂ ಆಗುತ್ತೇನೆ. ಸಿಎಂ ಆಗುವ ಆಸೆ ಇನ್ನೂ ಕಮರಿಲ್ಲ ಎಂದು  ಹೇಳಿದರು.Food Minister- Umesh katti- answer - ration -rice -good - die

ಖಾತೆ ಹಂಚಿಕೆ ವಿಚಾರ  ಸಿಎಂ ವಿವೇಚನೆಗೆ ಬಿಟ್ಟಿದ್ದು. ಯಾವ ಯಾವ ಖಾತೆಗಳನ್ನು ಯಾವಾಗ ಕೊಡ್ತಾರೋ ಅದನ್ನು ನಿವ೯ಹಿಸುತ್ತೇವೆ. ಯಾವುದೇ ಖಾತೆ ಕೊಟ್ಡರೂ ಚೆನ್ನಾಗಿ ಕೆಲಸ ಮಾಡಿಕೊಂಡು ಹೋಗುವುದು ನಮ್ಮ ಉದ್ದೇಶ.’ನಿರ್ದಿಷ್ಟ ಖಾತೆಗಾಗಿ ನಾನು ಸಿಎಂಗಾಗಲಿ, ಹೈಕಮಾಂಡ್ ಗಾಗಲಿ ಬೇಡಿಕೆ ಇಟ್ಟಿಲ್ಲ. ಜನ ಬಯಸುವ ಖಾತೆ ನೀಡಲಿ, ಒಳ್ಳೆಯ ರೀತಿಯಲ್ಲಿ ಕೆಲಸ ಮಾಡುತ್ತೇವೆ ಎಂದು ಉಮೇಶ್ ಕತ್ತಿ ತಿಳಿಸಿದರು.

Key words: minister-umesh katti-  luck- am -CM