Sunday, August 23, 2026

BDA Apartments

Home Cinema ಮೆಲ್ಬರ್ನ್ ಭಾರತೀಯ ಚಲನಚಿತ್ರೋತ್ಸವ: ಪ್ರಶಸ್ತಿ ಸುತ್ತು ತಲುಪಿದ ಕನ್ನಡದ ‘ಪಿಂಕಿ ಎಲ್ಲಿ’

ಮೆಲ್ಬರ್ನ್ ಭಾರತೀಯ ಚಲನಚಿತ್ರೋತ್ಸವ: ಪ್ರಶಸ್ತಿ ಸುತ್ತು ತಲುಪಿದ ಕನ್ನಡದ ‘ಪಿಂಕಿ ಎಲ್ಲಿ’

ಬೆಂಗಳೂರು,ಆಗಸ್ಟ್,6,2021(www.justkannada.in):  ಮೆಲ್ಬರ್ನ್ ಭಾರತೀಯ ಚಲನಚಿತ್ರೋತ್ಸವ- 2021(ಐಎಫ್​ಎಫ್​ಎಂ)ರ ಅಂತಿಮ ಪ್ರಶಸ್ತಿ ಸುತ್ತಿಗೆ  ಕನ್ನಡದ ‘ಪಿಂಕಿ ಎಲ್ಲಿ’ ಚಿತ್ರ ಆಯ್ಕೆಯಾಗಿದೆ.

ಹೌದು. ಮೆಲ್ಬರ್ನ್ ಭಾರತೀಯ ಚಲನಚಿತ್ರೋತ್ಸವ ಅಂತಿಮ ಪ್ರಶಸ್ತಿ ಸುತ್ತಿಗೆ ಆಯ್ಕೆಯಾದ ಚಿತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ವಿಶೇಷ ಎಂದರೆ ಇದರಲ್ಲಿ ಕನ್ನಡದ ಪಿಂಕಿ ಎಲ್ಲಿ ಚಿತ್ರವೂ ಪ್ರಶಸ್ತಿ ಸುತ್ತು ತಲುಪಿದೆ.  ಹನ್ನೆರಡನೇ ವರ್ಷದ ಚಿತ್ರೋತ್ಸವದ ಪಟ್ಟಿಯನ್ನು ಮೆಲ್ಬರ್ನ್​ನ ವಿಕ್ಟೋರಿಯಾ ಸರ್ಕಾರವು ಬಿಡುಗಡೆಗೊಳಿಸಿದ್ದು, ಪ್ರಶಸ್ತಿ ಸಮಾರಂಭವು ಆನ್​ಲೈನ್​ನಲ್ಲಿ ನಡೆಯಲಿದೆ

ರೀಚಾ ಛಡ್ಡಾ ಹಾಗೂ ನಿರ್ದೇಶಕ ಓನಿರ್ ಐಎಫ್​ಎಫ್​ಎಂ ಚಿತ್ರೋತ್ಸವಕ್ಕೆ ತೀರ್ಪುಗಾರರಾಗಿದ್ದಾರೆ. ಭಾರತದ ವಿವಿಧ ಭಾಷೆಯ ನೂರಕ್ಕೂ ಅಧಿಕ ಅತ್ಯುತ್ತಮ ಚಿತ್ರಗಳನ್ನು ಆಗಸ್ಟಟ್ 12ರಿಂದ ಆಗಸ್ಟ್ 20ರ ನಡುವೆ ಪ್ರದರ್ಶಿಸಲಾಗುತ್ತದೆ.