Wednesday, July 29, 2026

BDA Apartments

Home Front Page ಅನಿಲ್ ಕುಂಬ್ಳೆ ಟೆಸ್ಟ್ ವಿಕೆಟ್ ದಾಖಲೆ ಸರಿಗಟ್ಟಿದ ಜೇಮ್ಸ್ ಆಂಡರ್ಸನ್

ಅನಿಲ್ ಕುಂಬ್ಳೆ ಟೆಸ್ಟ್ ವಿಕೆಟ್ ದಾಖಲೆ ಸರಿಗಟ್ಟಿದ ಜೇಮ್ಸ್ ಆಂಡರ್ಸನ್

ಬೆಂಗಳೂರು, ಆಗಸ್ಟ್ 06, 2021 (www.justkannada.in): ಅನಿಲ್ ಕುಂಬ್ಳೆ ಅವರ ಟೆಸ್ಟ್ ವಿಕೆಟ್‌ಗಳ ದಾಖಲೆಯನ್ನು ಜೇಮ್ಸ್ ಆಂಡರ್ಸನ್ ಸರಿಗಟ್ಟಿದ್ದಾರೆ.

ಹೌದು. ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ

ನಾಯಕ ವಿರಾಟ್ ಕೊಹ್ಲಿ ವಿಕೆಟ್ ಜೇಮ್ಸ್ ಆಂಡರ್ಸನ್ ಪಾಲಾಗುತ್ತಿದ್ದಂತೆಯೇ ಭಾರತದ ದಿಗ್ಗಜ ಬೌಲರ್ ಅನಿಲ್ ಕುಂಬ್ಳೆ ಸಾಧನೆಯನ್ನು ಆಂಡರ್ಸನ್ ಸರಿಗಟ್ಟಿದ್ದರು.

ಅನಿಲ್ ಕುಂಬ್ಳೆ ಟೆಸ್ಟ್‌ನಲ್ಲಿ 619 ವಿಕೆಟ್ ಪಡೆದು ಟೆಸ್ಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರರ ಪೈಕಿ ಮೂರನೇ ಸ್ಥಾನದಲ್ಲಿದ್ದರು. ಈಗ ಜೇಮ್ಸ್ ಆಂಡರ್ಸನ್ ಕೂಡ ಇದೇ ಸಾಧನೆಯನ್ನು ಮಾಡಿದ್ದಾರೆ.

ವಿರಾಟ್ ಕೊಹ್ಲಿ ಹಾಗೂ ಜೇಮ್ಸ್ ಆಂಡರ್ಸನ್ ನಡುವಿನ ಈ ಕದನವನ್ನು ಶ್ರೇಷ್ಠ ಕದನ ಎಂದೇ ಬಣ್ಣಿಸಲಾಗುತ್ತಿದೆ. ಇದರಲ್ಲಿ ಮೊದಲ ಮುಖಾಮುಖಿಯಲ್ಲಿ ಜೇಮ್ಸ್ ಆಂಡರ್ಸನ್ ಮೇಲುಗೈ ಸಾಧಿಸಿದ್ದಾರೆ.