Tuesday, September 15, 2026

BDA Apartments

ದುಬಾರಿ ಕಾರಿಗೆ ಆಮದು ಸುಂಕ ವಿನಾಯಿತಿ ಕೇಳಿದ್ದ ಧನುಷ್’ಗೆ ಕೋರ್ಟ್ ಛೀಮಾರಿ ! B...
Home Cinema ದುಬಾರಿ ಕಾರಿಗೆ ಆಮದು ಸುಂಕ ವಿನಾಯಿತಿ ಕೇಳಿದ್ದ ಧನುಷ್’ಗೆ ಕೋರ್ಟ್ ಛೀಮಾರಿ !

ದುಬಾರಿ ಕಾರಿಗೆ ಆಮದು ಸುಂಕ ವಿನಾಯಿತಿ ಕೇಳಿದ್ದ ಧನುಷ್’ಗೆ ಕೋರ್ಟ್ ಛೀಮಾರಿ !

ಬೆಂಗಳೂರು, ಆಗಸ್ಟ್ 05, 2020 (www.justkannada.in): ನಟ ರಾಷ್ಟ್ರಪ್ರಶಸ್ತಿ ವಿಜೇತ ಧನುಷ್ ಅವರನ್ನು ಮದ್ರಾಸ್ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.

ಹೌದು. ದುಬಾರಿ ಕಾರಿನ ಮೇಲಿನ ಆಮದು ಸುಂಕ ವಿನಾಯಿತಿ ಕೇಳಿದ್ದ ಧನುಷ್ ಅವರನ್ನು ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ದಿನಗೂಲಿ ಕಾರ್ಮಿಕರು ಕೂಡ ತಾವು ಖರೀದಿಸುವ ಪ್ರತಿ ಲೀಟರ್ ಪೆಟ್ರೋಲ್‌ಗೆ ತೆರಿಗೆ ಪಾವತಿಸುತ್ತಿದ್ದಾರೆ. ಈ ವ್ಯಕ್ತಿಗಳು ತೆರಿಗೆ ವಿನಾಯಿತಿ ಕೋರಿ ಹೈಕೋರ್ಟ್ ಅನ್ನು ಸಂಪರ್ಕಿಸಿಲ್ಲ ಕೋರ್ಟ್ ಛಿಮಾರಿ ಹಾಕಿದೆ.

ನಟ ಧನುಷ್ ತನ್ನ ಆಮದು ಮಾಡಿದ ರೋಲ್ಸ್ ರಾಯ್ಸ್ ಘೋಸ್ಟ್ ಕಾರಿನ ಆಮದು ತೆರಿಗೆಯನ್ನು ಪ್ರಶ್ನಿಸಿ 2015ರಲ್ಲಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.