Wednesday, August 12, 2026

BDA Apartments

Home Front Page ಸಿದ್ಧರಾಮಯ್ಯಗೆ ತಿರುಗೇಟು: ಸಿಎಂ ಬೊಮ್ಮಾಯಿ ಸಂಪುಟದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಸಂಸದ ಶ್ರೀನಿವಾಸ್ ಪ್ರಸಾದ್.

ಸಿದ್ಧರಾಮಯ್ಯಗೆ ತಿರುಗೇಟು: ಸಿಎಂ ಬೊಮ್ಮಾಯಿ ಸಂಪುಟದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಸಂಸದ ಶ್ರೀನಿವಾಸ್ ಪ್ರಸಾದ್.

ಮೈಸೂರು,ಆಗಸ್ಟ್,5,2021(www.justkannada.in):  ಬೊಮ್ಮಾಯಿ ಸರ್ಕಾರದ ಸಮತೋಲಿತ ಸಂಪುಟ. ಎಲ್ಲಾ ಆಯಾಮಗಳಿಂದ ಸರ್ಕಾರ ಸಮತೋಲಿತವಾಗಿದೆ. ಜಾತಿವಾರು ಲೆಕ್ಕಾಚಾರದಲ್ಲೂ ಸರಿ ಇದೆ ಸಂಸದ ಶ್ರೀನಿವಾಸ ಪ್ರಸಾದ್ ಪ್ರಶಂಸೆ‌ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ  ಮಾಧ್ಯಮಗಳ ಜತೆ ಮಾತನಾಡಿದ ಸಂಸದ ಶ್ರೀನಿವಾಸ್ ಪ್ರಸಾದ್, ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ತಂದ ವಲಸಿಗರಿಗೆ ಮಣೆ ಹಾಕಲಾಗಿದ್ದು , ಇದು ಉತ್ತಮ ನಿರ್ಧಾರ. ಸರ್ಕಾರ ರಚನೆಗಾಗಿ ಕಾಂಗ್ರೆಸ್, ಜೆಡಿಎಸ್ ಬಿಟ್ಟು ಬಂದ ಬಹುತೇಕರಿಗೆ ಮಂತ್ರಿ ಸ್ಥಾನ ನೀಡಲಾಗಿದೆ. ಕೆಲವು ಹೊಸ ಮುಖಗಳಿಗೂ ಮಂತ್ರಿ ಮಂಡಲದಲ್ಲಿ ಅವಕಾಶ ನೀಡಿದ್ದಾರೆ. ಮೈಸೂರು ಭಾಗಕ್ಕೆ ಪ್ರಾತಿನಿಧ್ಯ ದೊರೆಯುವ ನಿರೀಕ್ಷೆ ಇತ್ತು. ಆದರೆ ಎಲ್ಲವನ್ನೂ ಸರಿದೂಗಿಸುವುದು ಸಾಧ್ಯವಿಲ್ಲ ಎಂದರು.

ಎಸ್.ಆರ್. ಬೊಮ್ಮಾಯಿ ರೀತಿ ಬಸವರಾಜ ಬೊಮ್ಮಾಯಿ ಆಗಲ್ಲ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಸಂಸದ ಶ್ರೀನಿವಾಸ ಪ್ರಸಾದ್, ಸಿದ್ದರಾಮಯ್ಯ ರೀತಿ ಅವರ ಮಗ ರಾಕೇಶ್ ಕೂಡ ಆಗಲಿಲ್ಲ. ರಾಕೇಶ್ ಏನಾದ್ರು ಅಂತಾ ಎಲ್ಲರಿಗೂ ಗೊತ್ತಿದೆ. ಮಾಜಿ ಸಿಎಂ ಆಗಿ ಹೀಗೆಲ್ಲಾ ಹೇಳೋದು ಎಷ್ಟು ಸರಿ. ಯಾರನ್ನು ಹೀಗೆ ಹೋಲಿಕೆ ಮಾಡಬಾರದು. ಇದು ಹಿರಿಯ ರಾಜಕರಾಣಿಗೆ ಶೋಭೆಯಲ್ಲ ಎಂದು ಟೀಕಿಸಿದರು.

Key words: MP -Srinivas Prasad -expressed -his admiration – CM Bommai-cabinet