Friday, October 2, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Crime ಪೊಲೀಸರ ಯಶಸ್ವಿ ಕಾರ್ಯಾಚರಣೆ: ಮೂವರು ಬೈಕ್ ಕಳ್ಳರು ಅಂದರ್.

ಪೊಲೀಸರ ಯಶಸ್ವಿ ಕಾರ್ಯಾಚರಣೆ: ಮೂವರು ಬೈಕ್ ಕಳ್ಳರು ಅಂದರ್.

ಮೈಸೂರು,ಜುಲೈ,31,2021(www.justkannada.in):  ಮೈಸೂರಿನ ವಿವಿ ಪುರಂ ಪೊಲೀಸರು ಕಾರ್ಯಾಚರಣೆ  ನಡೆಸಿ ಮೂವರು ಬೈಕ್ ಕಳ್ಳರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶಮಂತ್(20),ಗಿರೀಶ್( 19) ಹಾಗೂ ಮನು(20) ಬಂಧಿತ ಆರೋಪಿಗಳು. ಬಂಧಿತರಿಂದ 5.32 ಲಕ್ಷ ಮೌಲ್ಯದ 9 ಬೈಕ್ ಗಳು ವಶಕ್ಕೆ ಪಡೆಯಲಾಗಿದೆ. ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಆರೋಪಿಗಳನ್ನ ಬಂಧಿಸಲಾಗಿದ್ದು, ಮೈಸೂರಿನ ವಿವಿಧ ಠಾಣೆಯ 9 ಕಳುವು ಪ್ರಕರಣಗಳನ್ನ ಬೇಧಿಸಲಾಗಿದೆ.ganja peddlers arrested by mysore police

ಡಿಸಿಪಿಗಳಾದ ಪ್ರದೀಪ್ ಗಂಟಿ, ಗೀತಾಪ್ರಸನ್ನ ರವರ ಮಾರ್ಗದರ್ಶನದಲ್ಲಿ ಹಾಗೂ ಎಸಿಪಿ ಶಿವಶಂಕರ್ ಉಸ್ತುವಾರಿಯಲ್ಲಿ ವಿವಿ ಪುರಂ ಠಾಣೆಯ ಇನ್ಸ್ ಪೆಕ್ಟರ್ ವೆಂಕಟೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನ ಬಂಧಿಸಲಾಗಿದೆ.

Key words: successful -operation – police-three- bike thieves -arrest