Sunday, October 11, 2026

Dasara Wishes

ಗೂಗಲ್ ಕಂಪನಿ ಜತೆ VTU ಶೈಕ್ಷಣಿಕ ಒಪ್ಪಂದ: ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಸಹಿ ...
Happy Dasara
Home Front Page ನಾಗರಹೊಳೆಯಲ್ಲಿ ಬ್ಲ್ಯಾಕ್ ಪ್ಯಾಂಥರ್, ಬಂಡೀಪುರದಲ್ಲಿ ಹುಲಿ ಕಂಡ ಪ್ರವಾಸಿಗರು ಫುಲ್ ಖುಷ್ !

ನಾಗರಹೊಳೆಯಲ್ಲಿ ಬ್ಲ್ಯಾಕ್ ಪ್ಯಾಂಥರ್, ಬಂಡೀಪುರದಲ್ಲಿ ಹುಲಿ ಕಂಡ ಪ್ರವಾಸಿಗರು ಫುಲ್ ಖುಷ್ !

ಮೈಸೂರು, ಜುಲೈ 18, 2021:  ನಾಗರಹೊಳೆ ಅಭಯಾರಣ್ಯದಲ್ಲಿ ಬ್ಲಾಕ್ ಫ್ಯಾಂಥರ್ ದರ್ಶನ ನೀಡಿದೆ.

ನೆನ್ನೆ ಸಫಾರಿಗೆ ತೆರಳಿದ್ದ ಜನರಿಗೆ ಬ್ಕಾಕ್ ಪ್ಯಾಂಥರ್ ದರ್ಶನ ಸಿಕ್ಕಿದೆ. ನಾಗರಹೊಳೆಯ ದಮ್ಮನಕಟ್ಟೆ ರೇಂಜ್ ನಲ್ಲಿ ಕಾಣಿಸಿಕೊಂಡ ಕರಿ ಚಿರತೆ ಕಂಡು ಸಫಾರಿಗೆ ತೆರಳಿದ್ದವರು ಫುಲ್  ಖುಷಿಯಾಗಿದ್ದಾರೆ.

ಮರದ ಕೊಂಬೆಯ ಮೇಲೆ ಕರಿ ಚಿರತೆ ದರ್ಶನ ಕಂಡು ಪ್ರವಾಸಿಗರು ಫುಲ್ ಖುಷಿಯಾಗಿದ್ದಾರೆ. ಇನ್ನು  ಬಂಡೀಪುರದಲ್ಲಿ ಮಳೆಯ ನಡುವೆ ವ್ಯಾಘ್ರನ  ದರ್ಶನ ಸಿಕ್ಕಿದೆ.

ಇಂದು ಮುಂಜಾನೆ ಬಂಡೀಪುರದ ಸಫಾರಿ ಪ್ರಿಯರಿಗೆ ಹುಲಿ ದರ್ಶನವಾಗಿದೆ. ಲಾಕ್ಡೌನ್ ಬಳಿಕ ಸಫಾರಿ ತೆರಳಿದವರಿಗೆ ಸಾಲು ಸಾಲು ಪ್ರಾಣಿಗಳ ದರ್ಶನವಾಗಿದೆ.