ಮೂರು ದಿನಗಳಿಂದ ಕನ್ನಡ ಚಿತ್ರರಂಗ ಒಡೆದ ಮನೆಯಂತಾಗಿದೆ: ಸರಿ ಮಾಡುವ ಹಿರಿಯರು ಇಲ್ಲದಂತಾಗಿದೆ ಎಂದು ಜಗ್ಗೇಶ್ ಬೇಸರ

ಬೆಂಗಳೂರು, ಜುಲೈ 18, 2021: ಮೂರು ದಿನಗಳಿಂದ ಕನ್ನಡ ಚಿತ್ರ ರಂಗ ಒಡೆದ ಮನೆಯಂತಾಗಿದೆ. ಮನೆ ಮಕ್ಕಳು ಹಾದಿಬೀದಿಯಲಿ ಜಗಳವಾಡುತ್ತಿದ್ದಾರೆ. ಬುದ್ಧಿವಾದ ಹೇಳಲು ಮನೆಯ ಹಿರಿಯ ಇಲ್ಲವೇ ಎಂಬ ಕೊರಗು ಕಾಡತೊಡಗಿದೆ ಎಂದು ನಟ ಜಗ್ಗೇಶ್ ಬೇಸರ ವ್ಯಕ್ತಪಡಿಸಿದ್ದಾರೆ.

ವಾಣಿಜ್ಯಮಂಡಲಿ ಮಧ್ಯಪ್ರವೇಶಿಸಿ ಒಡೆದಮನಗಳ ಸರಿಮಾಡಬೇಕು ಎಂದು ವಾಣಿಜ್ಯ ಮಂಡಳಿಗೆ ಹಿರಿಯ ನಟ ಜಗ್ಗೇಶ್ ಮನವಿ ಮಾಡಿದ್ದಾರೆ.

ಫೇಸ್ಬುಕ್ ಪೋಸ್ಟ್ ಮಾಡಿ ಗೊಂದಲ ನಿವಾರಿಸುವಂತೆ ಮನವಿ ಮಾಡಿದ್ದಾರೆ. ಕನ್ನಡ ಚಿತ್ರೋದ್ಯಮದಲ್ಲಿ ತಾವು ಬೆಳೆದು ಬಂದ ಅನುಭವ ನೆನೆದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ರಾಜನಾಗಲಿ ಸೇವಕನಾಗಲಿ ಜಗಳ ಘರ್ಷಣೆ ಸಹಜ. ಆ ಘರ್ಷಣೆ ನಿಭಾಯಿಸುವ ಕಲೆ ಕರಗತ ಆಗಿರಬೇಕು ಆಗ ಕಾಡ್ಗಿಚ್ಚನ್ನು ತಣ್ಣಗೆ ಮಾಡಬಹುದು ಎಂದು ಸಲಹೆ ನೀಡಿದ್ದಾರೆ.

ಈಗಾಗಲೆ ಚಿತ್ರರಂಗ ಕೊರೊನಾ ಹೆಮ್ಮಾರಿ ಹೊಡೆತಕ್ಕೆ ನಲುಗಿದೆ.ಉದ್ಯಮದ ಹಿರಿಯರು ವಾಣಿಜ್ಯಮಂಡಲಿ ಮಧ್ಯಪ್ರವೇಶಿಸಿ ಎಂದು‌ ಮನವಿ ಮಾಡಿದ್ದಾರೆ.