Wednesday, October 7, 2026

BDA Apartments

immense respect BDA JK_Adv BDA Adv
Home Cinema ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮನೆ ಮೇಲೆ ಮದ್ಯದ ಬಾಟಲಿ ಎಸೆತ.

ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮನೆ ಮೇಲೆ ಮದ್ಯದ ಬಾಟಲಿ ಎಸೆತ.

ಬೆಂಗಳೂರು,ಜುಲೈ12,2021(www.justkannada.in): ಕೆ.ಆರ್ ಎಸ್ ಡ್ಯಾಂ ಬಿರುಕು ಮತ್ತು ಅಕ್ರಮ ಗಣಿಗಾರಕೆ ಕುರಿತು ಸಂಸದೆ ಸುಮಲತಾ ಮತ್ತು  ಮಾಜಿ ಸಿಎಂ ಕುಮಾರಸ್ವಾಮಿ ವಾಗ್ವಾದ ತಣ್ಣಗಾಗಿರುವ ಬೆನ್ನಲ್ಲೆ ಇದೀಗ ನಿರ್ಮಾಪಕ  ರಾಕ್ ಲೈನ್ ವೆಂಕಟೇಶ್ ಮನೆ ಮೇಲೆ ಇಬ್ಬರು ಕಿಡಿಗೇಡಿಗಳು ದಾಳಿ ನಡೆಸಿ ಬೀಯರ್ ಬಾಟಲ್ ಎಸೆದಿದ್ದಾರೆ.jk

ಸಂಸದೆ ಸುಮಲತಾ ವಿರುದ್ಙಧ  ವಾಕ್ಸಮರ ನಡೆಸಿದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ವಾಗ್ದಾಳಿ ನಡೆಸಿದ್ದರು. ಸಂಸದೆ ಸುಮಲತಾಗೆ ಬೆಂಬಲಿಸಿ ಮಾತನಾಡಿದ್ದರು. ಈ ಮಧ್ಯೆ ರಾಕ್ ಲೈನ್ ವೆಂಕಟೇಶ್ ವಿರುದ್ಧ ಜೆಡಿಎಸ್ ಕಾರ್ಯಕರ್ತರು, ಮುಖಂಡರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದರು.

ಇದೇ ಕಾರಣದಿಂದಾಗಿ ಸಂಸದೆ ಸುಮಲತಾ ಸೇರಿದಂತೆ ಹಲವರ ನಿವಾಸಗಳಿಗೂ ಸರ್ಕಾರ ಪೊಲೀಸ್ ಭದ್ರತೆಯನ್ನು ಹೆಚ್ಚಿಸಿತ್ತು. ಇದೀಗ ಮಹಾಲಕ್ಷ್ಮಿ ಲೇಔಟ್ ನಲ್ಲಿರುವ ರಾಕ್ ಲೈನ್ ವೆಂಕಟೇಶ್ ನಿವಾಸದ ಮೇಲೆ  ಕಿಡಿಗೇಡಿಗಳು ಬಿಯರ್ ಬಾಟಲ್ ಎಸೆದು ದಾಳಿ ನಡೆಸಿದ್ದಾರೆ.

ಈ ಬಗ್ಗೆ ರಾಕ್ ಲೈನ್ ವೆಂಕಟೇಶ್ ಮಾಹಿತಿ ನೀಡಿದ್ದು ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ನಾವು ಸುಮ್ಮನಿದ್ದರೂ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ. ಕಿಡಿಗೇಡಿಗಳು ಬಿಯರ್ ಬಾಟಲಿ ಎಸೆದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Key words: Producer -Rock Line- Venkatesh – house- throwing – bottle – liquor