Sunday, August 23, 2026

BDA Apartments

Home Crime ದರ್ಶನ್’ಗೆ ವಂಚನೆ ಯತ್ನ ಪ್ರಕರಣ; ದಾಖಲೆ ನಕಲಿ ಮಾಡಿ ಅಕ್ರಮಕ್ಕೆ ಯತ್ನ: ಡಿಸಿಪಿ ಪ್ರದೀಪ್ ಮಾಹಿತಿ

ದರ್ಶನ್’ಗೆ ವಂಚನೆ ಯತ್ನ ಪ್ರಕರಣ; ದಾಖಲೆ ನಕಲಿ ಮಾಡಿ ಅಕ್ರಮಕ್ಕೆ ಯತ್ನ: ಡಿಸಿಪಿ ಪ್ರದೀಪ್ ಮಾಹಿತಿ

ಮೈಸೂರು, ಜುಲೈ 11, 2021 (www.justkannada.in): ನಟ ದರ್ಶನ್ ಅವರ ದಾಖಲಾತಿ ನಕಲಿ ಮಾಡಿ ವಂಚನೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಪಿ ಪ್ರದೀಪ್ ಗುಂಟಿ ಮಾಹಿತಿ ನೀಡಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಅವರು, ಬ್ಯಾಂಕ್‌ನಲ್ಲಿ ಲೋನ್ ಕೊಡಿಸುವ ನೆಪದಲ್ಲಿ ವಂಚನೆಗೆ ಪ್ರಯ್ನತ ಮಾಡಲಾಗಿದೆ. ಆದ್ರೆ ಯಾರಿಗೂ ವಂಚನೆ ಆಗಿಲ್ಲ. ಮೈಸೂರಿನ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ತಿಳಿಸಿದ್ದಾರೆ.

ಆಸ್ತಿ ದಾಖಲೆಗಳನ್ನು ಫೋರ್ಜರಿ ಮಾಡಿ ಬ್ಯಾಂಕ್ ಲೋನ್ ಮಾಡಲು ಪ್ರಯತ್ನ ಮಾಡಲಾಗಿದೆ‌. ಈ ಸಂಬಂಧ ಹೆಬ್ಬಾಳ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರುದಾರ ಹರ್ಷ ಅವರನ್ನ ಮಾತ್ರ ನಾವು ವಿಚಾರಣೆಗೆ ಕರೆದಿದ್ದೆವು. ಬೇರೆ ಯಾರನ್ನು ನಾವು ವಿಚಾರಣೆಗೆ ಕರೆದಿಲ್ಲ. ಆದ್ರೆ ಹರ್ಷ ಅವರೊಂದಿಗೆ ಕೆಲ ಸ್ನೇಹಿತರು ಬಂದಿದ್ದರು. ಸದ್ಯಕ್ಕೆ ವಿಚಾರಣೆ ನಡೆಯುತ್ತಿದೆ. ಪ್ರಕರಣ ಸಂಬಂಧ ಯಾರನ್ನೂ ವಶಕ್ಕೆ ಪಡೆದಿಲ್ಲ. ಈಗ ವಿಚಾರಣೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಪ್ರಕರಣ ತನಿಖಾ ಹಂತದಲ್ಲಿ ಇರುವುದರಿಂದ ಹೆಚ್ಚಿನ ವಿವರ ನೀಡಲು ಸಾಧ್ಯವಿಲ್ಲ ಎಂದು ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಪ್ರದೀಪ್ ಗುಂಟಿ ಮಾಹಿತಿ ನೀಡಿದ್ದಾರೆ.Against,actor,Darshan,Under,Disaster,Management,Act,Case,record