Saturday, August 15, 2026

BDA Apartments

Home Front Page ನನ್ನ ಮಗ ಡ್ರೈವಿಂಗ್ ಮಾಡಲ್ಲ: ಆತನಿದ್ದ ಕಾರು ಅಪಘಾತವಾಗಿಲ್ಲ- ಡಿಸಿಎಂ ಲಕ್ಷ್ಮಣ್ ಸವದಿ ಸ್ಪಷ್ಟನೆ.

ನನ್ನ ಮಗ ಡ್ರೈವಿಂಗ್ ಮಾಡಲ್ಲ: ಆತನಿದ್ದ ಕಾರು ಅಪಘಾತವಾಗಿಲ್ಲ- ಡಿಸಿಎಂ ಲಕ್ಷ್ಮಣ್ ಸವದಿ ಸ್ಪಷ್ಟನೆ.

ಬೆಂಗಳೂರು,ಜುಲೈ,6,2021(www.justkannada.in): ಡಿಸಿಎಂ ಲಕ್ಷ್ಮಣ್ ಸವದಿ ತನ್ನ ಪುತ್ರನ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದು ನನ್ನ ಮಗ ಇದ್ಧಕಾರು ಅಪಘಾತವಾಗಿಲ್ಲ ಎಂದಿದ್ದಾರೆ.jk

ಈ ಕುರಿತು ಇಂದು ಮಾತನಾಡಿರುವ ಡಿಸಿಎಂ ಲಕ್ಷ್ಮಣ್ ಸವದಿ, ಸುಳ್ಳು ಯಾಕೆ ಹೇಳಬೇಕು. ನನ್ನ ಮಗ ಡ್ರೈವಿಂಗ್ ಮಾಡಲ್ಲ. ಚಾಲಕ ಹನುಮಂತ ಕಾರು ಚಾಲಾಯಿಸುತ್ತಾನೆ. ನನ್ನ ಮಗ ಚಿದಾನಂದ ಇದ್ಧ ಕಾರು ಅಪಘಾತವಾಗಿಲ್ಲ. ಅವರ ಸ್ನೇಹಿತರಿದ್ದ ಕಾರು ಅಪಘಾತವಾಗಿದೆ . ಮಂತ್ರಿಮಗ ಅಂದಾಗ ಇಂತಹ ಊಹಾಪೂಹಗಳು ಸಹಜ ಎಂದರು.

ನನ್ನ ಮಗ ಚಿದಾನಂದ ತನ್ನ ಸ್ನೇಹಿತರೊಡಗೂಡಿ ಕಿಟ್ ಹಂಚುತ್ತಿದ್ದರು. ಹೀಗಾಗಿ ಕೊಪ್ಪಳದ ಅಂಜನೇಯ ದೇಗುಲಕ್ಕೆ ತೆರಳಿದ್ದರು, ವಾಪಸ್ ಆಗುವಾಗ ಆತನ ಸ್ನೇಹಿತರಿದ್ದ ಕಾರು ಅಪಘಾತವಾಗಿದೆ. ಕಾರು ಅಪಘಾತದಲ್ಲಿ ಮೃತಪಟ್ಟ ರೈತನ ಕುಟುಂಬ ಜತೆ ನಾವಿದ್ದೇವೆ.  ನಾಳೆ ಅವರ ಮನೆಗೆ ಭೇಟಿ ನೀಡುತ್ತೇನೆ ಎಂದರು.

ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಪುತ್ರ ಚಿದಾನಂದ ಸವದಿ ಅವರ ಕಾರು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಕೂಡಲೆಪ್ಪ ಬೋಳಿ(58ವ) ತೀವ್ರ ಗಾಯಗೊಂಡು ಮೃತಪಟ್ಟ ಘಟನೆ ಕಳೆದ ರಾತ್ರಿ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಕೂಡಲಸಂಗಮ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಸಂಭವಿಸಿತ್ತು.

Key words: My son -not driving-no accident-DCM Laxman Savadi -clarifies.