Friday, August 7, 2026

BDA Apartments

Home Front Page ಮಿಸ್ಟರ್ ಕುಮಾರಸ್ವಾಮಿ ಮೈಂಡ್ ಯುವರ್ ಲಾಂಗ್ವೇಜ್: ಎಚ್.ವಿಶ್ವನಾಥ್ ಗುಡುಗು

ಮಿಸ್ಟರ್ ಕುಮಾರಸ್ವಾಮಿ ಮೈಂಡ್ ಯುವರ್ ಲಾಂಗ್ವೇಜ್: ಎಚ್.ವಿಶ್ವನಾಥ್ ಗುಡುಗು

ಮೈಸೂರು: ಸುಮಲತಾ ಹೆಚ್ ಡಿ ಕುಮಾರಸ್ವಾಮಿ ಮಾತಿನ ಸಮರ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ದ ಎಚ್ ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.

ನಿಮ್ಮ ಮಗನ ಸೋಲಿನ ಸೇಡನ್ನು ಈ ರೀತಿ ತೀರಿಸಿಕೊಳ್ಳುತ್ತಿದ್ದೀರಾ.? ಸುಮಲತಾ ಮಂಡ್ಯದ ಸೊಸೆ. ರೆಬೆಲ್‌ಸ್ಟಾರ್ ಅಂಬರೀಶ್ ಧರ್ಮಪತ್ನಿ. ಅಂತಹ ಹೆಣ್ಣು ಮಗಳಿಗೆ ಅವಮಾನ ಮಾಡುತ್ತೀರಾ.? ಎರಡು ಬಾರಿ ಸಿಎಂ ಆದವರ ಬಾಯಲ್ಲಿ ಇಂತಹ ಮಾತು ಬರಬಾರದು ಎಂದು ಕಿಡಿಕಾರಿದ್ದಾರೆ.

ಅಣೆಕಟ್ಟಿನ ಸಮಸ್ಯೆ ಇದ್ದರೆ ಪರಿಶೀಲಿಸೋಣ ಅಂತಾ ಹೇಳಿ. ಅದನ್ನು ಬಿಟ್ಟು ಹೆಣ್ಣು ಮಗಳನ್ನು ಮಲಗಿಸಿ ಅಂದರೆ ಏನು ಭಾಷೆ ಅದು.? ಮಿಸ್ಟರ್ ಕುಮಾರಸ್ವಾಮಿ ಮೈಂಡ್ ಯುವರ್ ಲಾಂಗ್ವೇಜ್  ಎಂದು ಹೆಚ್ ಡಿ ಕೆ ವಿರುದ್ದ ವಿಶ್ವನಾಥ್ ಗುಡುಗಿದ್ದಾರೆ.