Saturday, August 8, 2026

BDA Apartments

Home Front Page ದ್ವಿತೀಯ ಪಿಯು ರಿಪೀಟರ್ಸ್ ಗೆ ಗುಡ್ ನ್ಯೂಸ್: ಪರೀಕ್ಷೆ ಇಲ್ಲದೆ ಎಲ್ಲರೂ ಪಾಸ್.

ದ್ವಿತೀಯ ಪಿಯು ರಿಪೀಟರ್ಸ್ ಗೆ ಗುಡ್ ನ್ಯೂಸ್: ಪರೀಕ್ಷೆ ಇಲ್ಲದೆ ಎಲ್ಲರೂ ಪಾಸ್.

ಬೆಂಗಳೂರು ,ಜುಲೈ5,2021(www.justkannada.in):  ದ್ವಿತೀಯ ಪಿಯುಸಿ ರಿಪಿಟರ್ಸ್ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ.  ರಿಪೀಟರ್ಸ್ ಎಲ್ಲಾ ವಿದ್ಯಾರ್ಥಿಗಳನ್ನ ಪಾಸ್  ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.jk

ದ್ವಿತೀಯ ಪಿಯು ರಿಪೀಟರ್ಸ್ ಗೆ ಶೇ. 35 ರಷ್ಟು ಅಂಕ ನೀಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ರಾಜ್ಯ ಸರ್ಕಾರವು ಈ ಕುರಿತು ಇಂದು ಹೈಕೋರ್ಟ್ ಗೆ ಮಾಹಿತಿ ನೀಡಿದ್ದು, ಈ ಬಾರಿ ದ್ವಿತೀಯ ಪಿಯುಸಿ ರಿಪೀಟರ್ಸ್ ಗಳಿಗೆ ಪರೀಕ್ಷೆ ಇಲ್ಲದೇ ಶೇ. 35 ರಷ್ಟು ಅಂಕಗಳೊಂದಿಗೆ ಪಾಸ್ ಮಾಡಲು ನಿರ್ಧರಿಸಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ತಜ್ಞರ ವರದಿ ಆಧರಿಸಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಇದರಿಂದ 76 ಸಾವಿರ ರಿಪಿಟರ್ಸ್ ಪಾಸಾಗಲಿದ್ದಾರೆ ಎನ್ನಲಾಗಿದೆ. ಈಗಾಗಲೇ ರಾಜ್ಯ ಸರ್ಕಾರ ದ್ವಿತೀಯ ಪಿಯುಸಿಯ  ಹೊಸ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೆ ಪಾಸು ಮಾಡಿದೆ.

Key words: Good news – second PU –repeaters-Pass -all